ಆನ್‌ಲೈನ್ ಗೇಮ್ ಚಟ; ಸಾಲ ತೀರಿಸಲು ಹೆತ್ತ ತಾಯಿಯನ್ನೇ ಬಲಿಪಡೆದ ಪಾಪಿ ಪುತ್ರ!

Untitled design - 2024-02-25T141033.668
Published on

ಉತ್ತರಪ್ರದೇಶ: ಆಘಾತಕಾರಿ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದ್ದು, ಆನ್‌ಲೈನ್ ಗೇಮ್​ ಚಟಕ್ಕೆ ದಾಸನಾಗಿದ್ದ ವ್ಯಕ್ತಿಯೊಬ್ಬ ತಾನು ಮಾಡಿದ್ದ ಸಾಲದ ಹಣವನ್ನು ತೀರಿಸಲು ತನ್ನ ಹೆತ್ತ ತಾಯಿಯನ್ನೇ ಹತ್ಯೆಗೈದ ಘೋರ ಘಟನೆ ಉತ್ತರಪ್ರದೇಶದ ಫತೇಪುರದಲ್ಲಿ ವರದಿಯಾಗಿದೆ.

ಆನ್​ಲೈನ್​ ಚಟಕ್ಕೆ ದಾಸನಾಗಿದ್ದ ಈತ ತಾನು ಮಾಡಿದ್ದ ಸಾಲವನ್ನು ತೀರಿಸಲು ಹಲವಾರು ದಾರಿ ಹುಡುಕಿದ್ದಾನೆ. ಆದರೆ ಇದಕ್ಕೆ ಯಾವುದೇ ಮಾರ್ಗ ತೋಚದೆ ಇದ್ದಾಗ, ಹೆತ್ತ ತಾಯಿಯನ್ನು ಹತ್ಯೆಗೈದರೆ, ಅವರ ಸಾವಿನ ಬಳಿಕ ಬರುವ ವಿಮಾ ಹಣದಿಂದ ತನ್ನ ಸಾಲವನ್ನು ಮರುಪಾವತಿಸಬಹುದು ಎಂಬ ಕೆಟ್ಟ ನಿರ್ಧಾರ ಕೈಗೊಂಡು ತಾಯಿಯನ್ನೇ ಕೊಂದಿದ್ದಾನೆ.

50 ಲಕ್ಷ ರೂ. ವಿಮೆಗಾಗಿ ಹೆತ್ತ ತಾಯಿಯನ್ನು ಕೊಂದ ಪಾಪಿ ಪುತ್ರನನ್ನು ಸದ್ಯ ಪೊಲೀಸರು ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ. ತಾಯಿಯನ್ನು ಕೊಲೆ ಮಾಡಿದ ಬಳಿಕ ಆಕೆಯ ಶವವನ್ನು ಟ್ರ್ಯಾಕ್ಟರ್​ ಬಳಸಿ ಯಮುನಾ ನದಿ ದಡದ ಬಳಿ ಎಸೆದಿದ್ದಾನೆ ಎಂಬ ಆರೋಪಡಿ ಫತೇಪುರ್ ಪೊಲೀಸರು ಹಿಮಾಂಶುವನ್ನು ಬಂಧಿಸಿದ್ದಾರೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net