

ನವದೆಹಲಿ: ನ್ಯಾಯಾಂಗ ನಿಂದನೆ ಟ್ವೀಟ್ ಮಾಡಿ ಸುಪ್ರೀಂ ಕೋರ್ಟ್ನಿಂದ ದಂಡಕ್ಕೆ ಒಳಗಾದ ಪ್ರಶಾಂತ್ ಭೂಷಣ್ ಅವರು ಒಂದು ರೂಪಾಯಿ ಕೈಯಲ್ಲಿ ಹಿಡಿದ ಫೋಟೋವನ್ನು ಪ್ರಕಟಿಸಿ ಮೊದಲ ಪ್ರತಿಕ್ರಿಯೆಯನ್ನು ಟ್ವೀಟ್ ಮೂಲಕವೇ ಪ್ರಕಟಿಸಿದ್ದಾರೆ!
ಟ್ವೀಟ್ನಲ್ಲಿ ಅವರು ಎರಡು ಫೋಟೋಗಳನ್ನು ಪ್ರಕಟಿಸಿದ್ದು, ಒಂದರಲ್ಲಿ ಅವರು ಹಿರಿಯ ವಕೀಲ ರಾಜೀವ್ ಧವನ್ ಅವರಿಂದ ಒಂದು ರೂಪಾಯಿ ಸ್ವೀಕರಿಸುತ್ತಿರುವ ದೃಶ್ಯವಿದೆ. ಇನ್ನೊಂದರಲ್ಲಿ ಒಂದು ರೂಪಾಯಿ ಹಿಡಿದು ಪೋಸ್ ಕೊಟ್ಟಿರುವ ದೃಶ್ಯವಿದೆ.
ಶೀರ್ಷಿಕೆಯ ರೂಪದಲ್ಲಿ ಅವರು ಹೇಳಿರೋದಿಷ್ಟು- ಇವತ್ತು ನ್ಯಾಯಾಂಗ ನಿಂದನೆ ಕೇಸ್ನ ತೀರ್ಪು ಬಂದ ಕೂಡಲೇ ನನ್ನ ಲಾಯರ್ ಮತ್ತು ಹಿರಿಯ ಸಹೋದ್ಯೊಗಿ ರಾಜೀವ್ ಧವನ್ ಅವರು ಒಂದು ರೂಪಾಯಿ ಕೊಡುಗೆಯಾಗಿ ನೀಡಿದ್ರು. ಅದನ್ನು ನಾನು ಗೌರವ ಪೂರ್ವಕವಾಗಿ ಸ್ವೀಕರಿಸಿದ್ದೇನೆ.