ನ್ಯಾಯಾಂಗ ನಿಂದನೆ ಕೇಸ್ - ಪ್ರಶಾಂತ್ ಭೂಷಣ್​ಗೆ 1 ರೂಪಾಯಿ ದಂಡ

Prashanth bhushan
Published on

ನವದೆಹಲಿ: ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಅಡ್ವೋಕೇಟ್ ಪ್ರಶಾಂತ್ ಭೂಷಣ್ ಅವರನ್ನು ದೋಷಿ ಎಂದು ಪರಿಗಣಿಸಿದ ಸುಪ್ರೀಂ ಕೋರ್ಟ್​ ಸೋಮವಾರ ಒಂದು ರೂಪಾಯಿ ದಂಡ ವಿಧಿಸಿದೆ. ಸೆಪ್ಟೆಂಬರ್ 15ರೊಳಗೆ ದಂಡ ಪಾವತಿಸಬೇಕು ಇಲ್ಲವೇ ಮೂರು ತಿಂಗಳ ಜೈಲು ಶಿಕ್ಷೆ ಅನುಭವಿಸಬೇಕು ಮತ್ತು ಮೂರು ವರ್ಷ ಕಾಲ ವಕೀಲಿಕೆ ಮಾಡುವಂತಿಲ್ಲ ಎಂದು ಕೋರ್ಟ್ ತನ್ನ ತೀರ್ಪಿನಲ್ಲಿ ಆದೇಶಿಸಿದೆ.

ಪ್ರಶಾಂತ್ ಭೂಷಣ್ ಅವರು ಜೂನ್ 29 ರಂದು ಮಾಡಿದ್ದ ಎರಡು ಟ್ವೀಟ್​ಗಳ ಕಾರಣಕ್ಕೆ ಅವರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ್ದ ಕೋರ್ಟ್​ ಆಗಸ್ಟ್ 14ರಂದು ಭೂಷಣ್ ತಪ್ಪಿತಸ್ಥ ಎಂದು ಘೋಷಿಸಿತ್ತು. ನಂತರ ಆಗಸ್ಟ್ 20ರ ವಿಚಾರಣೆ ವೇಳೆ ಶಿಕ್ಷೆಯ ವಿಚಾರವಾಗಿ ವಾದಗಳನ್ನು ಆಲಿಸಿ ತೀರ್ಪನ್ನು ಆಗಸ್ಟ್ 25ರಂದು ಕಾಯ್ದಿರಿಸಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net