ದರ್ಗಾ ಕುಸಿದು ಒಬ್ಬನ ಸಾವು; ಇನ್ನೊಬ್ಬನ ಪರಿಸ್ಥಿತಿ ಗಂಭೀರ: ನೆಲಸಮಗೊಳಿಸುತ್ತಿದ್ದಾಗ ಅವಘಡ

Dargah Demolition
Published on

ಬೆಂಗಳೂರು: ದರ್ಗಾ ನೆಲಸಮಗೊಳಿಸುತ್ತಿದ್ದ ಸಂದರ್ಭದಲ್ಲಿ ಗೋಡೆ ಕುಸಿದು ಒಬ್ಬ ಸಾವಿಗೀಡಾಗಿದ್ದು, ಗಾಯಗೊಂಡಿರುವ ಇನ್ನೊಬ್ಬನ ಪರಿಸ್ಥಿತಿ ಗಂಭೀರವಾಗಿದೆ. ಬೆಂಗಳೂರಿನ ಅವೆನ್ಯೂ ರಸ್ತೆಯ ಹಜ್ರತ್ ಮೊಹಮ್ಮದ್ ಶಾ ದರ್ಗಾ ನೆಲಸಮ ವೇಳೆ ಈ ದುರ್ಘಟನೆ ಸಂಭವಿಸಿದೆ.

ಹಜರ್ ಉಲ್‌ ಹಕ್ (25) ಸಾವಿಗೀಡಾದ ಕಾರ್ಮಿಕ, ಗಾಯಗೊಂಡಿರುವ ಇನ್ನೊಬ್ಬನ ಪರಿಸ್ಥಿತಿ ಗಂಭೀರವಾಗಿದೆ. ಇವರಿಬ್ಬರು ಗುತ್ತಿಗೆ ಪಡೆದು ದರ್ಗಾ ನೆಲಸಮಗೊಳಿಸುತ್ತಿದ್ದಾಗ ವೇಳೆ ಛಾವಣಿ ಕುಸಿದು ಬಿದ್ದಿತ್ತು.

ಗಾಯಾಳುಗಳನ್ನು ಸ್ಥಳೀಯರು ಕೂಡಲೇ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿ ಒಬ್ಬ ಸಾವಿಗೀಡಾಗಿದ್ದಾನೆ. ಇನ್ನೊಬ್ಬನ ಪರಿಸ್ಥಿತಿ ಗಂಭೀರವಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಕೆ.ಆರ್.ಮಾರ್ಕೆಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net