ವಿಜಯವಾಣಿ ಸುದ್ದಿಜಾಲ ಕಲಬುರಗಿ
ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಘೋಷಣೆಗಳಿಗೆ ಏನೂ ಕಮ್ಮಿ ಇಲ್ಲ. ಬರವೂ ಇಲ್ಲ. ಹಿಂದೆ ರಾಜ್ಯದಲ್ಲಿಯೂ ಅದನ್ನೇ ಮಾಡಿದರು. ಈಗ ಬಿಜೆಪಿಯವರು ಒನ್ ನೇಷನ್ ಒನ್ ಎಲೆಕ್ಷನ್ ಅಂ ತಿದ್ದಾರೆ. ಓನ್ ನೇಷನ್ ಒನ್ ರೇಷನ್, ಓನ್ ನೇಷನ್ ಓನ್ ಎಜುಕೇಷನ್ ಹೀಗೆ ಘೋಷಣೆಗಳಿಗೆ ಏನೂ ಕಮ್ಮಿ ಇಲ್ಲ. ಹೀಗೆ ಕೊನೆಗೆ ಅವರು ಒನ್ ನೇಷನ್ ಓನ್ ಲೀಡರ್ ಅಂದು ಬಿಡುತ್ತಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ.ಹರಿಪ್ರಸಾದ ಬಿಜೆಪಿಗೆ ಟೀಕಿಸಿದರು.
ಓನ್ ನೇಷನ್ ಒನ್ ಎಲೆಕ್ಷನ್ ಈ ದೇಶದಲ್ಲಿ ನಡೆಯುವಂತಹುದಲ್ಲ. ಅದು ಕಾರ್ಯ ಸಾಧುವಲ್ಲ ಎಂದರು. ಬಿಜೆಪಿಯವರು ಬರಿ ಕೆಲಸಕ್ಕೆ ಬಾರದ ಘೋಷಣೆ ಮಾಡಿ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುವುದು ಬಿಟ್ಟರೆ ಅವರಿಗೇನು ಗೊತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು. ಹೆಸರು ಉಲ್ಲೇಖಿಸದೆ ಬಿ.ಎಲ್.ಸಂತೋಷ ಅವರಿಗೆ ಟಾಂಗ್ ನೀಡಿದರು.
ಕಾಂಗ್ರೆಸ್‌ನ ೪೫ ಜನ ಶಾಸಕರು ಸಂಪರ್ಕದಲ್ಲಿz್ದÁರೆ. ಒಂದೇ ದಿನದಲ್ಲಿ ಬೇಕಾದರೆ ಸರ್ಕಾರ ಬಿಳಿಸುತ್ತೇವೆ ಎಂದು ಬಿಜೆಪಿಯವರು ಟ್ವಿಟ್ ಮಾಡಿದ್ದರೆ. ಆಪರೇಷನ್ ಕಮಲದಲ್ಲಿ ಅವರು ಡಾಕ್ಟರೇಟ್ ಪಡೆದವರು. ಬಿಜೆಪಿಯವರು ಸರ್ಕಾರ ಬಿಳಿಸುತ್ತೇನೆ ಅಂತ ಹೇಳುತ್ತಾರೆ. ನೋಡೋಣ ಎನಾಗುತ್ತೆ ಎಂಬುದು ಕೆಲ ದಿನಗಳಲ್ಲಿಯೇ ಗೊತ್ತಾಗುತ್ತದೆಯಲ್ಲ, ಕಾಯೋಣ. ಎಂದು ಬಿ.ಕೆ.ಹರಿಪ್ರಸಾದ ಹೇಳಿದರು