ನಿಮಗಿದು ಒಪ್ಪಿಗೆಯೇ? ಎಂದು ಸಾಧು-ಸಂತರನ್ನು ಗುರಿಯಾಗಿಸಿ ಇನ್ನೊಂದು ವಿವಾದಾತ್ಮಕ ಹೇಳಿಕೆ ನೀಡಿದ ನಟ ಪ್ರಕಾಶ್ ರಾಜ್​

Prakash Raj (6)
Published on

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಕೈಗೊಂಡಿದ್ದ ಮಹತ್ವದ ಚಂದ್ರಯಾನ-3ಗೆ ಸಂಬಂಧಿಸಿದಂತೆ ವಿವಾದಾತ್ಮಕ ಹೇಳಿಕೆ ನೀಡಿ, ಟ್ರೋಲಿಗೆ ಒಳಗಾಗಿರುವ ನಟ ಪ್ರಕಾಶ್ ರಾಜ್​, ಈಗ ಒಂದೆರಡು ದಿನಗಳಿಂದ ಹಿಂದೂಗಳನ್ನು ಗುರಿಯಾಗಿಸಿ ವಿವಾದಾತ್ಮಕ ಹೇಳಿಕೆ ನೀಡುತ್ತಿದ್ದಾರೆ.

ಹಿಂದೂಗಳು ತನಾತನಿಗಳು ಅಲ್ಲ, ತನಾತನಿಗಳು ಮಾನವವಿರೋಧಿಗಳು. ನೀವು ಇದನ್ನು ಒಪ್ಪಿದರೆ ರಿಟ್ವೀಟ್ ಮಾಡಿ, ಎಲ್ಲರಿಗೂ ಹ್ಯಾಪಿ ಸಂಡೇ ಎಂದು ಪ್ರಕಾಶ್ ರಾಜ್ ನಿನ್ನೆಯಷ್ಟೇ​ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು. ಇದರಿಂದ ಬಹಳಷ್ಟು ಮಂದಿ ತೀವ್ರ ಬೇಸರಗೊಂಡಿದ್ದು, ಪ್ರಕಾಶ್​ ರಾಜ್ ಭಾರಿ ಟ್ರೋಲ್​ಗೆ ಒಳಗಾಗಿದ್ದರು.

ಅದಾಗ್ಯೂ ಇಂದು ಕೂಡ ಇನ್ನೊಂದು ವಿವಾದಾತ್ಮಕ ಹೇಳಿಕೆ ನೀಡಿರುವ ಅವರು, ಸಾಧು-ಸಂತರನ್ನು ಗುರಿಯಾಗಿಸಿ ಪೋಸ್ಟ್ ಮಾಡಿದ್ದಾರೆ. ಹೊಸ ಸಂಸತ್ ಭವನ ಉದ್ಘಾಟನೆ ಸಂದರ್ಭದಲ್ಲಿ ಪ್ರಧಾನಿ ಮೋದಿ ಜತೆ ಸಾಧು-ಸಂತರು ತೆಗೆಸಿಕೊಂಡಿದ್ದ ಫೋಟೋ ಹಂಚಿಕೊಂಡಿರುವ ಪ್ರಕಾಶ್ ರಾಜ್, 'ಪ್ರೀತಿಯ ಪ್ರಜೆಗಳೆ.. ಇದು ಭವಿಷ್ಯದ ಸಾಧ್ಯತೆ.. #ತನಾತನಿ ಸಂಸತ್ತು.. ನಿಮಗಿದು ಒಪ್ಪಿಗೆಯೆ?' ಎಂದು ಪ್ರಶ್ನಿಸಿದ್ದಾರೆ. ಈ ಮೂಲಕ, ಮುಂದೊಂದು ದಿನ ಸಂಸತ್ತಿನಲ್ಲಿ ಸಾಧು-ಸಂತರು ತುಂಬಿಹೋಗಲಿದ್ದಾರೆ ಎಂದು ಅವರು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net