ನಮ್ಮ ಮೆಟ್ರೋ ಕಾಮಗಾರಿ ವೇಳೆ ಮತ್ತೊಂದು ಅವಘಡ; ಕಂಬಿಗಳನ್ನು ಮೇಲೆತ್ತುತ್ತಿದ್ದ ಕ್ರೇನ್​ ಕುಸಿತ!

Namma Metro
Published on

ಮಡಿವಾಳ: ರಾಜಧಾನಿ ಬೆಂಗಳೂರಿನ ಸಮೂಹ ಸಾರಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ನಮ್ಮ ಮೆಟ್ರೋ ಕಾಮಗಾರಿ ಸಂದರ್ಭದಲ್ಲಿ ಇನ್ನೊಂದು ಅವಘಡವಾಗಿದೆ. ಮಡಿವಾಳದಲ್ಲಿ ನಡೆಯುತ್ತಿದ್ದ ಮೆಟ್ರೋ ಕಾಮಗಾರಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ.

ನಮ್ಮ ಮೆಟ್ರೋ ಕಾಮಗಾರಿ ಸಂದರ್ಭ ಪಿಲ್ಲರ್​ಗೆ ಹಾಕುವ ತಂತಿ ಮೇಲೆತ್ತುತ್ತಿರುವಾಗ ಏಕಾಏಕಿ ಕ್ರೇನ್​ನ ಹೈಡ್ರಾಲಿಕ್​ನಲ್ಲಿ ಸಮಸ್ಯೆ ಉಂಟಾಗಿ ಕ್ರೇನ್ ಹಠಾತ್ ಕುಸಿದಿದೆ. ಆಗ ಕಂಬಿಗಳೆಲ್ಲ ವಾಲಿ ಬಿದ್ದಿವೆ. ಅದೃಷ್ಟವಶಾತ್ ಆ ಸಮಯದಲ್ಲಿ ಕಾರ್ಮಿಕರು ಕಡಿಮೆ ಇದ್ದಿದ್ದರಿಂದ ಸಂಭಾವ್ಯ ಭಾರಿ ಅನಾಹುತ ತಪ್ಪಿದೆ.

ಈ ಪ್ರಕರಣದಿಂದಾಗಿ ಕೆಲ ಹೊತ್ತು ಮಡಿವಾಳ ಜಂಕ್ಷನ್ ಬಳಿ ಆತಂಕದ ಪರಿಸ್ಥಿತಿ ಉಂಟಾಗಿತ್ತು. ಕೂಡಲೇ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಸಂಚಾರ ದಟ್ಟಣೆ, ಜನ ಜಮಾವಣೆಯನ್ನು ಚದುರಿಸಿ ಸೂಕ್ತ ಕ್ರಮಕೈಗೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net