ಎಲ್ಲರಿಗೂ ಒಂದೇ ಕಾನೂನು ಅನ್ವಯ

tgt rp
ಯುವಜನ ಬಳಗ ಆಯೋಜಿಸಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕ ರಾಘವೇಂದ್ರ ಅವರನ್ನು ಸನ್ಮಾನಿಸಲಾಯಿತು. ನಟರಾಜ್, ತೊಳಜಾನಾಯ್ಕ, ಇಸಾಕ್, ಗಿರೀಶ್ ಇತರರಿದ್ದರು.
Published on

ತ್ಯಾಗರ್ತಿ: ದೇಶದಲ್ಲಿ ವಿವಿಧ ಜಾತಿ, ಧರ್ಮಗಳ ಜನರು ವಾಸವಿದ್ದರೂ ಭಾರತೀಯ ಸಂವಿಧಾನದಲ್ಲಿ ಎಲ್ಲರೂ ಸಮಾನರು ಎಂದು ಸರ್ಕಾರಿ ಶಾಲೆ ನಿವೃತ್ತ ಶಿಕ್ಷಕ ರಾಘವೇಂದ್ರ ಹೇಳಿದರು. ಕಾಗೋಡು ತಿಮ್ಮಪ್ಪ ವೃತ್ತದಲ್ಲಿ ಭಾನುವಾರ ಯುವಜನ ಬಳಗ ಏರ್ಪಡಿಸಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಸಂವಿಧಾನದ ಪ್ರಕಾರ ಎಲ್ಲ ನಾಗರಿಕರಿಗೂ ಜೀವಿಸುವ, ಮಾತನಾಡುವ ಹಕ್ಕು ನೀಡಲಾಗಿದೆ. ಸಂವಿಧಾನ ಶಿಲ್ಪಿ ಅಂಬೇಡ್ಕರ್ ಕೊಡುಗೆಯನ್ನು ಈ ಸಂದರ್ಭದಲ್ಲಿ ಸ್ಮರಿಸಬೇಕು ಎಂದರು. ಯುವಜನ ಬಳಗದ ಪ್ರಮುಖರಾದ ಇಸಾಕ್, ಪ್ರದೀಪ್, ಅಭಿಲಾಷ್, ಪ್ರೌಢಶಾಲೆಗಳ ಮುಖ್ಯ ಶಿಕ್ಷಕರಾದ ನಟರಾಜ್, ತೊಳಜಾನಾಯ್ಕ, ಗ್ರಾಪಂ ಸದಸ್ಯ ಎಚ್.ಗಿರೀಶ್ ಇತರರಿದ್ದರು. ಸಾರ್ವಜನಿಕ ಗಣರಾಜ್ಯೋತ್ಸವದಲ್ಲಿ ನಿವೃತ್ತ ನೌಕರ ಪುರುಷೋತ್ತಮ ಧ್ವಜಾರೋಹಣ ನೆರವೇರಿಸಿದರು. ಗ್ರಾಪಂ ಅಧ್ಯಕ್ಷೆ ಪ್ರಭಾವತಿ ಲೋಕಪ್ಪ, ಪಿಡಿಒ ಮೋಹನ್ ಇದ್ದರು. ಪಿಎಸಿಎಸ್‌ನಲ್ಲಿ ಅಧ್ಯಕ್ಷ ಟಿ.ಕೆ.ಹನುಮಂತಪ್ಪ ನೆರವೇರಿಸಿದರು. ಕಾರ್ಯದರ್ಶಿ ಜೈಕುಮಾರ್, ನಿರ್ದೇಶಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net