ಟ್ರಾಫಿಕ್​ ಉಲ್ಲಂಘನೆಯ ದಂಡ ಕಟ್ಟಲು ಹೋದರೆ ಇತ್ತು ಮೀಟರ್​ಗಟ್ಟಲೆ ಬಿಲ್!

traffic fine'
Published on

ಬೆಂಗಳೂರು: ಹೆಣ್ಣೂರು ಸಂಚಾರ ಪೊಲೀಸ್​ ಠಾಣೆಯಲ್ಲಿ ಇಂದು ಬಾಕಿ ದಂಡಗಳನ್ನು ಸಂಸ್ಥೆಯೊಂದರ ಪ್ರತಿನಿಧಿ ಬಂದಿದ್ದು ಬಿಲ್​ನ ಉದ್ದ ಕಂಡು ಸುತ್ತ ಇದ್ದವರೆಲ್ಲರೂ ದಂಗಾಗಿದ್ದಾರೆ.

ಇಂದು (ಜೂ.15) ಹೆಣ್ಣೂರು ಸಂಚಾರ ಪೊಲೀಸ್ ಠಾಣೆ ಸರಹದ್ದಿನಲ್ಲಿರುವ ಯೂರೋ ಕ್ಯಾಬ್ಸ್ ಸಂಸ್ಥೆಗೆ ಸಂಬಂಧಪಟ್ಟ 82 ಕ್ಯಾಬ್​ಗಳ ಮೇಲಿನ ಹಳೆಯ ಪ್ರಕರಣಗಳನ್ನು ಮುಕ್ತಾಯ ಮಾಡಿ ದಂಡವನ್ನು ವಶಪಡಿಸಿಕೊಳ್ಳಲಾಯಿತು.

ಒಟ್ಟು 207 ಐಎಂವಿ ಪ್ರಕರಣಗಳನ್ನು ಮುಕ್ತಾಯ ಮಾಡಲಾಗಿದ್ದು ಸಂಗ್ರಹವಾದ ದಂಡ 1,16,000/- (ಒಂದು ಲಕ್ಷ ಹದಿನಾರು ಸಾವಿರ )ರೂ.! ಯೂರೋ ಕ್ಯಾಬ್ಸ್​ ಸಂಸ್ಥೆ ದಂಡವನ್ನು ಪಾವತಿಸಿದ್ದು ಈ ಮೂಲಕ ಸರ್ಕಾರಕ್ಕೆ ತಲುಪಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net