

ವಿಜಯನಗರ: ಸ್ವಚ್ಚ ನಗರ ಸಂಕಲ್ಪಕ್ಕೆ ಹೊಸಪೇಟೆ ನಗರಸಭೆ ವಿಶೇಷ ಹೆಜ್ಜೆ ಇಟ್ಟಿದ್ದು ಕಸ ಸಂಗ್ರಹಕ್ಕೆ ಬೂತ್ ವ್ಯವಸ್ಥೆ ಮಾಡಿದ್ದಾರೆ. ಈ ಕುರಿತಾಗಿ ಹೊಸಪೇಟೆ ನಗರಸಭೆ ಪೌರಾಯುಕ್ತ ಮನೋಹರ್ ಮಾಹಿತಿ ನೀಡಿದ್ದಾರೆ.
ಹೊಸಪೇಟೆಯಲ್ಲಿ ದಿನವೂ ಟನ್ಗಟ್ಟಲೇ ಕಸ ಉತ್ಪಾನದೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ಹೊಸಪೇಟೆ ನಗರಸಭೆ, ನಗರದ 8 ಕಡೆ ಹಾಲಿನ ಮಾದರಿಯ ಬೂತ್ ವ್ಯವಸ್ಥೆ ಮಾಡಿದೆ. ಅದಲ್ಲದೇ ಎಲ್ಲೆಂದರಲ್ಲಿ ಕಸ ಹಾಕುವಂತಿಲ್ಲ, ಹಾಕಿದಲ್ಲಿ ದಂಡ ವಿಧಿಸುವುದಾಗಿ ಎಚ್ಚರಿಕೆ ಕೂಡ ನೀಡಲಾಗಿದೆ.
ಜನರು ಬೇಕಾಬಿಟ್ಟಿ ಕಸ ಎಎಯುವ ಜಾಗಗಳನ್ನು ಟಾರ್ಗೆಟ್ ಮಾಡಿರುವ ನಗರಸಭೆ, ಅಲ್ಲಿ ಬೂತ್ ವ್ಯವಸ್ಥೆಯನ್ನು ಮಾಡಿದೆ. ಈ ಹಾಲಿನ ಮಾದರಿಯ ಬೂತ್ನಲ್ಲಿ ಹಸಿ ಕಸ, ಒಣ ಕಸ ಬೇರ್ಪಡಿಸಿ ಹಾಕಲು ಪ್ರತ್ಯೇಕ ಬಾಕ್ಸ್ಗಳ ಇಡಲಾಗಿದೆ. ಇವು ಬೆಳಗ್ಗೆ 5 ಗಂಟೆಯಿಂದ 11 ಗಂಟೆಯವರೆಗೆ, ಕಾರ್ಯನಿರ್ವಹಿಸಲಿದ್ದು ಸಾಯಂಕಾಲ 5 ಗಂಟೆಯಿಂದ ರಾತ್ರಿ 10 ಗಂಟೆಯವರೆಗೂ ತೆರೆದಿರಲಿವೆ.
ಆ ಬೂತ್ನಲ್ಲಿ ಹೊಸಪೇಟೆ ನಗರಸಭೆಯ ಸಿಬ್ಬಂದಿ ಇರಲಿದ್ದು ಕಸ ನಿರ್ವಹಣೆ ಮಾಡಲಿದ್ದಾರೆ. ವರ್ಷದ 365 ದಿನವೂ ಈ ಕಸ ಸಂಗ್ರಹ ಘಟಕ ಕೆಲಸ ಮಾಡಲಿದ್ದು ಜನರು ಕಸ ಎಲ್ಲೆಂದರಲ್ಲಿ ಎಸೆಯದಂತೆ ತಡೆಯಲು ನಗರಸಭೆ ಕೈಗೊಂಡಿರುವ ನೂತನ ಪ್ರಯೋಗ ಇದಾಗಿದೆ.