ಭರ್ಜರಿ ಪಾರ್ಟಿ ಮಧ್ಯೆ ಫೈರಿಂಗ್​; 17 ವರ್ಷದ ಯುವಕ ಸಾವು, 20ಕ್ಕೂ ಹೆಚ್ಚು ಮಂದಿಗೆ ಗಾಯ

Party
Published on

ವಾಷಿಂಗ್ಟನ್​ ಡಿಸಿ: ಖುಷಿಯಿಂದ ನಡೆಯುತ್ತಿದ್ದ ಪಾರ್ಟಿಯಲ್ಲಿ ಒಂದು ಸಣ್ಣ ವಿಚಾರಕ್ಕೆ ಜಗಳ ಶುರುವಾಗಿ, ಅದು ಗುಂಡು ಹಾರಿಸುವ ಮಟ್ಟಕ್ಕೆ ತಲುಪಿದ ಘಟನೆ ವಾಷಿಂಗ್ಟನ್​ ಡಿಸಿಯಲ್ಲಿ ನಡೆದಿದೆ.

ಫೈರಿಂಗ್​​ನಿಂದಾಗಿ ಓರ್ವ ಮೃತಪಟ್ಟಿದ್ದು, 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಮೆಟ್ರೊಪಾಲಿಟನ್​ ಪೊಲೀಸರು ತಿಳಿಸಿದ್ದಾರೆ.

ವಾಷಿಂಗ್ಟನ್ ಡಿಸಿಯ ಆಗ್ನೇಯದಲ್ಲಿರುವ ಪ್ರದೇಶವೊಂದರಲ್ಲಿ ನೆರೆಹೊರೆಯವರೆಲ್ಲ ಸೇರಿ ಮಧ್ಯರಾತ್ರಿ ಔಟ್​ಡೋರ್ ಪಾರ್ಟಿ ಹಮ್ಮಿಕೊಂಡಿದ್ದರು. ಸಂಗೀತ, ವಿವಿಧ ತಿನಿಸುಗಳು ಭರ್ಜರಿಯಾಗಿದ್ದವು. ಆದರೆ ಏನೋ ಒಂದು ಸಣ್ಣ ಜಗಳ ಶುರುವಾಯಿತು. ನಂತರ ಗುಂಡು ಹಾರಿಸಲಾಗಿದೆ. 17 ವರ್ಷದ ಯುವಕ ಮೃತಪಟ್ಟಿದ್ದಾನೆ. 20 ಮಂದಿ ಗಾಯಗೊಂಡಿದ್ದರೂ, ತೀವ್ರ, ಜೀವ ಹೋಗುವಷ್ಟು ಅಲ್ಲ ಎಂದು ಪೊಲೀಸ್​ ಮಾಹಿತಿ ನೀಡಿದ್ದಾರೆ. ಹಾಗೇ, ಅಲ್ಲಿ ಕರ್ತವ್ಯದಲ್ಲಿದ್ದ ಮಹಿಳಾ ಪೊಲೀಸ್ ಅಧಿಕಾರಿಗೆ ಕೂಡ ಗುಂಡೇಟು ಬಿದ್ದಿದೆ. ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಹೇಳಿದ್ದಾರೆ.

ಕರೊನಾ ವೈರಸ್​ ಇರುವುದರಿಂದ ನಿರ್ಬಂಧ ಹೇರಲಾಗಿದೆ. ಅದರ ನಡುವೆಯೂ ಹೀಗೆ ನೂರಾರು ಜನರು ಸೇರಿ ಪಾರ್ಟಿ ಮಾಡಿದ್ದಾರೆ. ತನಿಖೆ ನಡೆಸಲಾಗುತ್ತಿದೆ. ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net