ಕಾರವಾರ: ತಾಯಿ ಜೊತೆ ನದಿಗೆ ಹೋದ ಮಗು ನಾಪತ್ತೆ

kwr edit
Published on

ಉತ್ತರಕನ್ನಡ: ತಾಯಿಯೊಂದಿಗೆ ಬಟ್ಟೆ ತೊಳೆಯಲು ತೆರಳಿದ್ದ ಮಗು ಆಕಸ್ಮಿಕವಾಗಿ ನದಿಗೆ ಬಿದ್ದು ನಾಪತ್ತೆಯಾಗಿರುವ ಘಟನೆ ಹೊನ್ನಾವರ ತಾಲೂಕಿನ ಹುಡಗೋಡು ಬಳಿ ನಡೆದಿದೆ. 

ಒಂದೂವರೆ ವರ್ಷದ ಕಾರ್ತಿಕ ರಮೇಶ ನಾಯ್ಕ ನಾಪತ್ತೆಯಾಗಿರುವ ಮಗು. ಭಾನುವಾರ ಮಧ್ಯಾಹ್ನ ಮನೆ ಸಮೀಪವೇ ಇರುವ ಗುಂಡಬಾಳಾ ನದಿಗೆ ತಾಯಿ ಜೊತೆ ಬಟ್ಟೆ ತೊಳೆಯಲು ತೆರಳಿದ್ದಾರೆ. ಈ ವೇಳೆ ಆಕಸ್ಮಿಕವಾಗಿ ಮಗು ನೀರಿಗೆ ಬಿದ್ದಿದ್ದು, ತಕ್ಷಣ ತಾಯಿ ಕೂಗಿಕೊಂಡಿದ್ದಾರೆ.

ಆಗ ಅಕ್ಕಪಕ್ಕದಲ್ಲಿದ್ದ ಜನರು ತಕ್ಷಣ ಸಹಾಯಕ್ಕೆ ಧಾವಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ದೋಣಿಯ ಮೂಲಕ ಮಗುವಿಗಾಗಿ ಹುಡುಕಾಟ ನಡೆಸುತ್ತಿದ್ದು, ಹೊನ್ನಾವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net