More

    ಚಾಮರಾಜನಗರ ಆಕ್ಸಿಜನ್ ದುರಂತ: ಮನಕಲಕುವ ಸತ್ಯ ಹಂಚಿಕೊಂಡ ಡಿಕೆಶಿ..

    ಬೆಂಗಳೂರು: ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ 20ಕ್ಕೂ ಹೆಚ್ಚು ಜನ ಸಾವನ್ನಪ್ಪಿರುವ ಘಟನೆಗೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮನಕಲಕುವ ವಿಡಿಯೋವನ್ನು ಹಂಚಿಕೊಂಡು, ನೊಂದ ಕುಟುಂಬದವರಿಗೆ ಸಾಂತ್ವಾನ ಹೇಳಿದ್ದಾರೆ.  

    ಚಾಮರಾಜನಗರದಲ್ಲಿ ಆಮ್ಲಜನಕ ಕೊರತೆಯಿಂದಾಗಿ, 36 ಜನರ ಕುಟುಂಬಗಳು ತಮ್ಮವರನ್ನು ಕಳೆದುಕೊಂಡು ಕಷ್ಟದ ಪರಿಸ್ಥಿತಿ ಎದುರಿಸುವಂತಾಗಿದೆ. ಈ ದುರಂತದ ಹಿಂದಿನ ಸತ್ಯ ಹೊರಬರುತ್ತಿದೆ. ಆಡಳಿತದ ದೌರ್ಜನ್ಯಕ್ಕೊಳಗಾದ ಅಸಹಾಯಕರ ದನಿಯಾಗಿ ನಾವಿದ್ದೇವೆ ಎನ್ನುವ ಮೂಲಕ ನೊಂದ ಕುಟುಂಬದವರಿಗೆ ಧೈರ್ಯ ಹೇಳಿದ್ದಾರೆ.

    ಇದನ್ನೂ ಓದಿ: ಚಾಮರಾಜನಗರ ಆಕ್ಸಿಜನ್​ ದುರಂತ: ರಾಜ್ಯ ಸರ್ಕಾರದಿಂದ ನ್ಯಾಯಾಂಗ ತನಿಖೆಗೆ ಆದೇಶ

    ದುರಂತದ ಹಿನ್ನೆಲೆ:

    ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ ಮೇ 02 ರಂದು 20ಕ್ಕೂ ಹೆಚ್ಚು ಜನ ಕರೊನಾ ಸೋಂಕಿತರು ಪ್ರಾಣಬಿಟ್ಟಿದ್ದರು. ಈ ಘಟನೆ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು.
    ಆಕ್ಸಿಜನ್​ ಹಾಹಾಕಾರ ಭೀಕರತೆಗೆ ಚಾಮರಾಜಗರದಲ್ಲಿನ ಈ ಘಟನೆಯೇ ಸಾಕ್ಷಿಯಾಗಿತ್ತು. ಆಕ್ಸಿಜನ್​ ಇಲ್ಲದೆ 20ಕ್ಕೂ ಹೆಚ್ಚು ಮಂದಿ ಆಸ್ಪತ್ರೆ ಒಳಗೆ ಹೆಣವಾಗಿದ್ದರೆ, ಆಸ್ಪತ್ರೆ ಹೊರಗೆ ಹಲವರ ಶವ ಅನಾಥವಾಗಿ ಬಿದ್ದಿದ್ದ ದೃಶ್ಯ ಎಲ್ಲೆಡೆ ಹರಿದಾಡಿತ್ತು.

    ಚಾಮರಾಜನಗರ ಆಕ್ಸಿಜನ್​ ದುರಂತ: ರೋಹಿಣಿ ಸಿಂಧೂರಿ ಸೇಫ್​​, ಕೊನೆಗೂ ಆ ದಿನದ ರಹಸ್ಯ ಬಿಚ್ಚಿಟ್ಟ ಸಮಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts