

Door Glass : ಕಾರಿನ ಸ್ವಂಚಾಲಿತ ಡೋರ್ ಗ್ಲಾಸ್ನಲ್ಲಿ ಸಿಲುಕಿ ಒಂದುವರೆ ವರ್ಷದ ಮಗು ಮೃತಪಟ್ಟಿರುವ ಘಟನೆ ಉತ್ತರಪ್ರದೇಶದ ಬಲಿಯಾ ಜಿಲ್ಲೆಯಲ್ಲಿ ಸೋಮವಾರ ನಡೆದಿದೆ.
ಇಲ್ಲಿನ ಚಕಿಯಾ ಗ್ರಾಮದ ರೋಷನ್ ಎಂಬುವವರ ಸಹೋದರಳಿಯ ರೇಯಾಶ್ನಿ ಮೃತ ಮಗು. ಚಕಿಯಾದಿಂದ ಚಂಡಿದಿಹ್ ಗ್ರಾಮಕ್ಕೆ ರೋಷನ್ ಕುಟುಂಬದೊಂದಿಗೆ ದೇವಸ್ಥಾನಕ್ಕೆ ತೆರಳುವಾಗ ಈ ಘಟನೆ ಸಂಭವಿಸಿದೆ.
ನಡೆದಿದ್ದೇನು..?
ಕುಟುಂಬದ ಪ್ರಕಾರ, ಮಗು ರೇಯಾಶ್ನಿ ಕಿಟಕಿಯಿಂದ ತಲೆ ಹೊರ ಹಾಕಿ ಕೋತಿಗಳನ್ನು ನೋಡುತ್ತಿದ್ದ. ಏಕಾಏಕಿ ಕಾರ್ ಸ್ಟಾಟ್ ಆದ ಕಾರಣದಿಂದ ಸ್ವಯಂಚಾಲಿ ಡೋರ್ ಗ್ಲಾಸ್ ಇದಕ್ಕಿದ್ದಂತೆ ಮುಚ್ಚಿಕೊಂಡಿದೆ. ಇದರಿಂದಾಗಿ ಕುತ್ತಿಗೆ ಸಿಲುಕಿಗೊಂಡಿದೆ. ಕೂಡಲೇ ಮಗುವನ್ನು ಆಸ್ಪತ್ರೆ ದಾಖಲಿಸಿತಾದರೂ ಮೃತಪಟ್ಟಿರುವ ವಿಷಯ ವೈದ್ಯರು ತಿಳಿಸಿದ್ದಾರೆ.
ಈ ಘಟನೆಯ ನಂತರ, ಇಡೀ ಕುಟುಂಬದಲ್ಲಿ ದುಃಖ ಮಡುಗಟ್ಟಿದ್ದು, ಕುಟುಂಬದವರೂ ಇಲ್ಲಿಯವರೆಗೆ ಯಾವುದೇ ದೂರು ದಾಖಲಿಸಿಲ್ಲ. ಆದರೆ, ಪೊಲೀಸರು ಈ ವಿಷಯದ ಬಗ್ಗೆ ತನಿಖೆ ಪ್ರಾರಂಭಿಸಿದ್ದಾರೆ ಎಂದು ವರದಿಯಾಗಿದೆ.(ಏಜೆನ್ಸೀಸ್)