ಒಂದೂವರೆ ಕೋಟಿ ರೂ. ಮೌಲ್ಯದ ಡ್ರಗ್ಸ್ ಸೀಜ್, ಕಿಂಗ್​ಪಿನ್​ಗಾಗಿ ಹುಡುಕಾಟ

CCB
Published on

ಬೆಂಗಳೂರು: ನಗರದಲ್ಲಿ ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಬರೋಬ್ಬರಿ ಒಂದೂವರೆ ಕೋಟಿ ರೂ. ಮೌಲ್ಯದ ಡ್ರಗ್ಸ್ ಸೀಜ್ ಮಾಡಿದ್ದಾರೆ.

ಎಲ್ಎಸ್​ಡಿ, ಎಂಡಿಎಂಎ, ಎಕ್ಸ್ಟೇಸಿ ಡ್ರಗ್ಸ್ ಅನ್ನು ಸೀಜ್ ಮಾಡಲಾಗಿದ್ದು, ಕೇರಳ ಮೂಲದ ನಾಲ್ವರು ಡ್ರಗ್ಸ್ ಪೆಡ್ಲರ್​ಗಳನ್ನು(ಮಾದಕ ವಸ್ತು ವ್ಯಾಪಾರಿಗಳು) ಬಂಧಿಸಿದ್ದಾರೆ. ಈ ಮಾದಕ ವಸ್ತು ಮಾರಾಟ ಜಾಲದ ಕಿಂಗ್​ಪಿನ್ ಧೀರಜ್​. ನೆದರ್‌ಲ್ಯಾಂಡ್, ಜರ್ಮನಿಯಿಂದ ಪೋಸ್ಟಲ್ ಮೂಲಕ ಈತ ತರಿಸುತ್ತಿದ್ದ ಡ್ರಗ್ಸ್​ ಅನ್ನು ಕೇರಳ ಮೂಲದ ನಾಲ್ವರು ಮಾರಾಟ ಮಾಡುತ್ತಿದ್ದರು. ಧೀರಜ್​ಗಾಗಿ ಶೋಧಕಾರ್ಯ ಮುಂದುವರಿದಿದೆ.

ಡ್ರಗ್ಸ್ ಡೀಲರ್​ಗಳಾದ ಶಹದ್ ಮೊಹಮದ್, ಅಜ್ಮಲ್, ಅಜಿನ್ ಕೆಜಿವರ್ಗೇಶ್, ನಿತಿನ್ ಮೋಹನ್ ಎಂಬುವವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಇಂಥವರಿಗೆ ಮಾರಾಟ ಮಾಡ್ಬೇಕು

ಸಿಸಿಬಿ ಪೊಲೀಸರು ಬಂಧಿಸಿರುವ ಡ್ರಗ್ಸ್ ಪೆಡ್ಲರ್​ಗಳು.
ಸಿಸಿಬಿ ಪೊಲೀಸರು ಬಂಧಿಸಿರುವ ಡ್ರಗ್ಸ್ ಪೆಡ್ಲರ್​ಗಳು.

ಎಂದು ಧೀರಜ್ ಮೆಸೇಜ್​ ಕೊಡುತ್ತಿದ್ದ. ಅದರಂತೆ ಅವರು ತನ್ನಕಡೆಯ ಹುಡುಗರ ಮೂಲಕ ಡ್ರಗ್ಸ್ ರಿಸೀವ್ ಮಾಡಿಸಿಕೊಂಡು ಮಾರಾಟ ಮಾಡುತ್ತಿದ್ದರು. ದೊಡ್ಡ ದೊಡ್ಡ ಪಾರ್ಟಿಗಳೂ ಇವರ ಮಾರಾಟದ ಅಡ್ಡೆಯಾಗಿತ್ತು. ಡಿಜೆಗಳಲ್ಲಿ ಹೆಚ್ಚಾಗಿ ಎಲ್​ಎಸ್​ಡಿ ಮಾರಾಟ ಮಾಡುತ್ತಿದ್ದರು.

ಗೋವಾ, ಪಬ್​ ಎಂದು ಓಡಾಡಿಕೊಂಡಿದ್ದ ಧೀರಜ್​, ತಾನಿರುವಲ್ಲಿಂದಲೇ ಡ್ರಗ್ಸ್ ಮಾರಾಟ ಮಾಡಿಸುತ್ತಿದ್ದ. ಸದ್ಯ ಈತನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

dE

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net