More

    ಲಾಕ್​ಡೌನ್​ ವೇಳೆ ಗಾಂಜಾ ಮಾರಾಟ, ಮನೆಯಲ್ಲಿರೋ ವಿದ್ಯಾರ್ಥಿಗಳೇ ಇವರ ಟಾರ್ಗೆಟ್ !

    ಬೆಂಗಳೂರು: ಪೋಷಕರೇ ಜಾಗ್ರತೆ, ‘ಇದು ಕರೊನಾ ಟೈಂ- ಮಕ್ಕಳೆಲ್ಲರೂ ಮನೆಯಲ್ಲೇ ಇರ್ತಾರೆ’ ಅಂದುಕೊಂಡು ಸುಮ್ಮನಾಗಬೇಡಿ. ನಿಮ್ಮ ಮಕ್ಕಳ ಚಲನವಲನದ ಮೇಲೊಂದು ಕಣ್ಣಿಡಿ. ಗಾಂಜಾ ಮಾರಾಟ ಜಾಲ ನಗರದಲ್ಲಿ ಸಕ್ರಿಯವಾಗಿದ್ದು, ಮನೆಯಲ್ಲಿರೋ ವಿದ್ಯಾರ್ಥಿಗಳೇ ಇವರ ಟಾರ್ಗೆಟ್!

    ಹೌದು, ಲಾಕ್​ಡೌನ್ ಸಮಯವನ್ನೇ ಬಂಡವಾಳ‌ ಮಾಡಿಕೊಂಡಿರುವ ಸಮಾಜಘಾತುಕರು ಗಾಂಜಾ ಮಾರಾಟ ದಂಧೆಯಲ್ಲಿ ತೊಡಗಿದ್ದಾರೆ. ಇಂದು (ಭಾನುವಾರ) ಪೂರ್ವ ವಿಭಾಗದ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ 15 ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಆ ಪೈಕಿ ನೈಜೀರಿಯನ್ ಪ್ರಜೆಯೂ ಒಬ್ಬ.

    ಇದನ್ನೂ ಓದಿರಿ ಸಂಡೇ ಲಾಕ್​ಡೌನ್​ ವೇಳೆ ಸದ್ದು ಮಾಡಿದ ಪೊಲೀಸ್ ರಿವಾಲ್ವರ್… ಇಬ್ಬರ ಕಾಲಿಗೆ ಗುಂಡೇಟು!

    ಮನೆಯಲ್ಲಿ ಕೂತ ವಿದ್ಯಾರ್ಥಿಗಳನ್ನೇ ಟಾರ್ಗೆಟ್ ಮಾಡುವ ಗಾಂಜಾ ವ್ಯಾಪಾರಿಗಳು ಫೋನ್ ಮೂಲಕವೇ ವ್ಯವಹಾರ ಕುದುರಿಸುತ್ತಾರೆ. ಫೋನ್​ನಲ್ಲೇ ವಿದ್ಯಾರ್ಥಿಗಳನ್ನು ಸಂಪರ್ಕಿಸಿ ಗಾಂಜಾ ಸಪ್ಲೈ ಮಾಡುತ್ತಾರೆ. ಈ ಅಕ್ರಮ ಜಾಲದ ಬೆನ್ನಟ್ಟಿರುವ ಪೊಲೀಸರು ನಗರದ ವಿವಿಧೆಡೆ 12 ತಾಸಿನಲ್ಲಿ ಗಾಂಜಾ ಸಮೇತ ಮೂವರು ಗಾಂಜಾ ಸರಬರಾಜುದಾರರು ಹಾಗೂ 12 ಮಂದಿ ಗಾಂಜಾ ಗ್ರಾಹಕರನ್ನು ಬಂಧಿಸಿದ್ದಾರೆ.

    ಬಾಣಸವಾಡಿ ಠಾಣೆ ಪೊಲೀಸರು ನೈಜೀರಿಯನ್ ಪ್ರಜೆ ಚುಕ್ವುವ್ಮೆಕಾ ಎಜೋಬಿ(35) ಯನ್ನು ಬಂಧಿಸಿ, ಆತನ ಬಳಿ ಇದ್ದ ೫ ಗ್ರಾಂ MDMI ವಶ ಪಡಿಸಿಕೊಂಡಿದ್ದಾರೆ. ಹೆಣ್ಣೂರು ಪೊಲೀಸ್​ ಠಾಣೆಯಲ್ಲಿ ಚಿಕ್ಕಣ್ಣಾ ಲೇಔಟ್​ ನಿವಾಸಿ ಆನಂದ ಎಂಬಾತನನ್ನು ವಶಕ್ಕೆ ಪಡೆದು, 600 ಗ್ರಾಂ ಗಾಂಜಾ ಜಪ್ತಿ ಮಾಡಿದ್ದಾರೆ. ಇನ್ನು ಕೆ.ಜಿ. ಹಳ್ಳಿ ಠಾಣೆ ಪೊಲೀಸರು ಕೆ.ಜಿ.ಹಳ್ಳಿ ನಿವಾಸಿ ಸೈಯದ್ ನಾಜೀಮ್ ಎಂಬಾತನನ್ನ ಬಂಧಿಸಿ, ಆತನಿಂದ 1 ಕೆ.ಜಿ. ಗಾಂಜಾ ವಶಕ್ಕೆ ಪಡೆದಿದ್ದಾರೆ.

    ಭಾರತಿನಗರ, ಇಂದಿರಾನಗರ, ಹೆಣ್ಣೂರು, ಶಿವಾಜಿನಗರ, ಡಿ.ಜೆ.ಹಳ್ಳಿ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಮಾದಕವಸ್ತು ಸೇವನೆ ಮಾಡುತ್ತಿದ್ದ ಒಟ್ಟು 12 ಯುವಕರನ್ನು ವಶಕ್ಕೆ ಪಡೆಯಲಾಗಿದೆ.

    ಕಾರು ಅಡ್ಡಗಟ್ಟಿ 45.5 ಲಕ್ಷ ರೂ. ದರೋಡೆ, ಕದ್ದ ಹಣವನ್ನು ಟೈರ್​ನಲ್ಲಿ ಬಚ್ಚಿಟ್ಟಿದ್ದ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts