More

    ಜನಗಣತಿ ಬಳಿಕ ಪಾಲಿಕೆ ಚುನಾವಣೆ ನಡೆಸಲು ಕೋರಿ ಸಿಎಂಗೆ ಪತ್ರ

    ಬೆಂಗಳೂರು: ಜನಗಣತಿ ಪೂರ್ಣಗೊಳಿಸಿದ ಬಳಿಕ ಬಿಬಿಎಂಪಿಗೆ ಚುನಾವಣೆ ನಡೆಸಬೇಕು ಎಂದು ಕೋರಿ ಮಾಹಿತಿ ಹಕ್ಕು ಅಧ್ಯಯನ ಕೇಂದ್ರವು ಮುಖ್ಯಮಂತ್ರಿಗೆ ಪತ್ರ ಬರೆದು ಒತ್ತಾಯಿಸಿದೆ.

    ಈ ಸಂಬಂಧ ಸಿಎಂಗೆ ಬರೆದಿರುವ ಪತ್ರದಲ್ಲಿ, ಹಾಲಿ ಜನಗಣತಿ ಇನ್ನೂ ಆರಂಭವಾಗಿಲ್ಲ. ಕೋವಿಡ್ ಹಾಗೂ ಇನ್ನಿತರ ಕಾರಣದಿಂದ ತಾತ್ಕಾಲಿಕವಾಗಿ ಸ್ಥಗಿತಗೊಂಡಿರುವ ಗಣತಿ ಪ್ರಕ್ರಿಯೆಯನ್ನು ಪುನಾರಂಭಿಸಬೇಕು. ಹೊಸ ಗಣತಿಯಲ್ಲಿನ ಅಂಕಿ-ಅಂಶಗಳನ್ನು ಆಧರಿಸಿ ಪಾಲಿಕೆ ಚುನಾವಣೆಗೆ ಬಳಸಿಕೊಳ್ಳಬೇಕು ಎಂದು ಮನವಿ ಮಾಡಲಾಗಿದೆ.

    ಈ ಹಿಂದಿನ ಗಣತಿ 14 ವರ್ಷದ ಹಿಂದೆ ಮಾಡಲಾಗಿದೆ. ಇದನ್ನಾಧರಿಸಿ ವಾರ್ಡ್ ಮೀಸಲು ನಿಗದಿ ಮಾಡುವುದು ಅವೈಜ್ಞಾನಿಕವಾಗಿರುತ್ತದೆ. ಈ ಅಂಶವನ್ನು ಬಿಟ್ಟು ಮುಂದುವರಿದರೆ ನ್ಯಾಯಾಲಯದ ಮೊರೆ ಹೋಗುತ್ತಾರೆ. ಅಲ್ಲದೆ ಮೊದಲು ವಾರ್ಡ್ ವಿಂಗಡಣೆ ವೇಳೆ ಹಾಲಿ ಪಾಲಿಕೆಯ ಸುತ್ತಲಿನ 1 ಕಿ.ಮೀ. ಸುತ್ತಲಿನ ಪ್ರದೇಶವನ್ನು ಸೇರ್ಪಡೆ ಮಾಡಲಾಗಿದೆ. ಆದರೆ, ವಾರ್ಡ್‌ಗಳ ಮರುವಿಂಗಡಣೆ ಮಾಡುವಾಗ ಈ ಪ್ರದೇಶಗಳನ್ನು ಸೇರಿಸಿಕೊಂಡಿಲ್ಲ. ಇದನ್ನು ಕೂಡ ಚುನಾವಣಾ ಟಿಕೆಟ್ ಆಕಾಂಕ್ಷಿಗಳು ನ್ಯಾಯಾಲಯದಲ್ಲಿ ಪ್ರಶ್ನಿಸುವ ಸಾಧ್ಯತೆ ಇದೆ. ಹೀಗಾಗಿ ಹೊಸದಾಗಿ ಜನಗಣತಿ ಮಾಡಿದ ನಂತರ ವೈಜ್ಞಾನಿಕ ಮೀಸಲು ನಿಗದಿಗೊಳಿಸಿ ಪಾಲಿಕೆ ಚುನಾವಣೆ ನಡೆಸಬೇಕು ಎಂದು ಮಾಹಿತಿ ಹಕ್ಕು ಅಧ್ಯಯನ ಕೇಂದ್ರದ ವ್ಯವಸ್ಥಾಪಕ ಟ್ರಸ್ಟಿ ಎಸ್.ಅಮರೇಶ್ ಅವರು ಮುಖ್ಯಮಂತ್ರಿಗೆ ಬರೆದಿರುವ ಪತ್ರದಲ್ಲಿ ನಮೂದಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts