

ಕೊಡಗು: ಜಿಲ್ಲೆಯ ಕಾಫಿ ತೋಟವೊಂದರಲ್ಲಿ ಕಾಡಾನೆ ದಾಳಿಯಿಂದ ಕೂದಲೆಳೆ ಅಂತರದಲ್ಲಿ ಮಹಿಳೆಯೊಬ್ಬರು ಪಾರಾಗಿದ್ದು, ಈ ರೋಚಕ ಕ್ಷಣದ ದೃಶ್ಯ ವೈರಲ್ ಆಗಿದೆ.
ವೀರಾಜಪೇಟೆ ತಾಲೂಕಿನ ಮಾಲ್ದಾರೆ ಗ್ರಾಮದಲ್ಲಿ ಗುರುವಾರ ಸಂಜೆ ಒಂಟಿಸಲಗ ಸಂಚರಿಸಿದೆ. ಗ್ರಾಮದ ಕಾಫಿ ತೋಟವೊಂದರಲ್ಲಿ ಕೂಲಿ ಕೆಲಸಕ್ಕೆ ಹೋಗಿದ್ದ ಕಳ್ಳಹಳ್ಳ ನಿವಾಸಿ ಉಷಾ ಮನೆಗೆ ವಾಪಸ್ ಬರುತ್ತಿದ್ದರು. ಆ ವೇಳೆ ಮಾರ್ಗ ಮಧ್ಯೆ ಒಂಟಿಸಲಗ ಎದುರಾಯ್ತು!
ವೇಗವಾಗಿ ಬರುತ್ತಿದ್ದ ಕಾಡಾನೆಯನ್ನ ಕಂಡ ಉಷಾ ಎದ್ನೋಬಿದ್ನೋ ಎಂದು ರಸ್ತೆ ಪಕ್ಕದ ತೋಟಕ್ಕೆ ನುಗ್ಗಿ ಆನೆ ಕಣ್ಣಿಂದ ಮರೆಯಾಗುವ ಮೂಲಕ ಸಾವಿನ ದವಡೆಯಿಂದ ಪಾರಾದರು. ಈ ದೃಶ್ಯವನ್ನು ಸ್ಥಳೀಯರು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದು, ವೈರಲ್ ಆಗಿದೆ.
ಈ ಭಾಗದಲ್ಲಿ ಕಾಡಾನೆಗಳು ಹಾವಳಿ ಹೆಚ್ಚಾಗಿದ್ದು, ಗ್ರಾಮಸ್ಥರು ಆತಂಕದಲ್ಲಿದ್ದಾರೆ. ಆನೆಯಿಂದ ಮಹಿಳೆ ಬಚಾವ್ ಆದ ದೃಶ್ಯ ನೋಡಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ.
ಈ ವಿಡಿಯೋ ನೋಡಿ