ಒಂದೇ ವಾರದಲ್ಲಿ ಮತ್ತೆ 30 ದೇಶಗಳಿಗೆ ವ್ಯಾಪಿಸಿದ ಒಮಿಕ್ರಾನ್​, ಮೂರೇ ದಿನಗಳೊಳಗೆ ದುಪ್ಪಟ್ಟಾಗುತ್ತಿರುವ ಸೋಂಕು!

omicron
ಸಾಂದರ್ಭಿಕ ಚಿತ್ರ
Published on

ನವದೆಹಲಿ: ಜಗತ್ತಿನಾದ್ಯಂದ ಆತಂಕ ಸೃಷ್ಟಿಸಿರುವ ಒಮಿಕ್ರಾನ್​, ಇದೀಗ ಮತ್ತೆ 30 ದೇಶಗಳಿಗೆ ವ್ಯಾಪಿಸುವ ಮೂಲಕ ಸೋಂಕಿನ ಭೀತಿಯನ್ನು ಹೆಚ್ಚಿಸಿದೆ. ಮಾತ್ರವಲ್ಲ, ಸೋಂಕಿನ ಪ್ರಮಾಣ 3 ದಿನಗಳಿಗೆ ದುಪ್ಪಟ್ಟಾಗುತ್ತಿದೆ ಎಂಬ ಮಾಹಿತಿಯೂ ಬಹಿರಂಗಗೊಂಡಿದೆ.

ಕರೊನಾದ ಹೊಸ ರೂಪಾಂತರಿ ವೈರಸ್​ ಒಮಿಕ್ರಾನ್ ಕುರಿತ ಈ ಅಂಶಗಳನ್ನು ವಿಶ್ವ ಆರೋಗ್ಯ ಸಂಸ್ಥೆಯೇ ಬಹಿರಂಗಗೊಳಿಸಿದೆ. ಡಿ. 10ರಂದು ಜಗತ್ತಿನ 59 ದೇಶಗಳಲ್ಲಿ ಒಮಿಕ್ರಾನ್​ ಕಾಣಿಸಿಕೊಂಡಿದೆ ಎಂಬ ಮಾಹಿತಿ ಹೊರಬಿದ್ದಿತ್ತು. ಆದರೆ ಇದೀಗ ಒಮಿಕ್ರಾನ್ ಜಗತ್ತಿನ ಇನ್ನೂ 30 ರಾಷ್ಟ್ರಗಳಲ್ಲಿ ಹಬ್ಬಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಡಿ. 16ರ ಮಾಹಿತಿ ಪ್ರಕಾರ 89 ದೇಶಗಳಲ್ಲಿ ಒಮಿಕ್ರಾನ್ ಕಾಣಿಸಿಕೊಂಡಿದ್ದು, ಶೀಘ್ರದಲ್ಲೇ ಅದು ಡೆಲ್ಟಾ ವೇರಿಯಂಟ್​ ಪ್ರಕರಣಗಳಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಳ್ಳಲಿದೆ. ಒಮಿಕ್ರಾನ್ ಎಷ್ಟು ವೇಗವಾಗಿ ಹರಡುತ್ತಿದೆ ಎಂದರೆ ಒಂದೂವರೆಯಿಂದ 3 ದಿನಗಳಲ್ಲಿ ಸೋಂಕಿನ ಪ್ರಮಾಣ ದುಪ್ಪಟ್ಟಾಗುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net