

ಬೆಂಗಳೂರು: ಅಜ್ಜಿಯೊಂದಿಗೆ ಫ್ಲ್ಯಾಟ್ ನೋಡಲು ಹೋಗಿದ್ದ ಎರಡು ವರ್ಷದ ಬಾಲಕ ಐದನೇ ಮಹಡಿಯಿಂದ ಬಿದ್ದು ಸಾವಿಗೀಡಾದ ದುರಂತವೊಂದು ನಗರದಲ್ಲಿ ಸಂಭವಿಸಿದೆ. ದಿವ್ಯಾಂಶ್ ರೆಡ್ಡಿ (2) ಸಾವಿಗೀಡಾದ ಬಾಲಕ.
ಎಲೆಕ್ಟ್ರಾನಿಕ್ ಸಿಟಿಯ ಇನ್ವೆಸ್ಮೆಂಟ್ ಲೇಔಟ್ನಲ್ಲಿ ಈ ಅವಘಡ ಸಂಭವಿಸಿದೆ. ದಿವ್ಯಾಂಶ್ನ ಅಜ್ಜಿ ಕೆಲವು ದಿನಗಳಿಂದ ಬಾಡಿಗೆ ಮನೆಗಾಗಿ ಹುಡುಕಾಟ ನಡೆಸುತ್ತಿದ್ದರು.
ಇಂದು ಸಂಜೆ ಇನ್ವೆಸ್ಮೆಂಟ್ ಲೇಔಟ್ನ ಅಪಾರ್ಟ್ಮೆಂಟ್ವೊಂದರಲ್ಲಿನ ಫ್ಲ್ಯಾಟ್ ನೋಡಲು ಹೋಗುವಾಗ ಅಜ್ಜಿ ದಿವ್ಯಾಂಶ್ನನ್ನು ಕರೆದುಕೊಂಡು ಹೋಗಿದ್ದರು.
ಅಜ್ಜಿ ಫ್ಲ್ಯಾಟ್ ನೋಡುತ್ತಿದ್ದಾಗ ಬಾಲಕ ಆಯತಪ್ಪಿ ಐದನೇ ಮಹಡಿಯಿಂದ ಕೆಳಕ್ಕೆ ಬಿದ್ದು ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ. ಎಲೆಕ್ಟ್ರಾನಿಕ್ ಸಿಟಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.