More

    ಜಗತ್ತಿನ 59 ದೇಶಗಳಲ್ಲಿ ಪತ್ತೆಯಾಗಿದೆ ಒಮಿಕ್ರಾನ್​; ಭಾರತದಲ್ಲಿ ಇದುವರೆಗಿನ ಪ್ರಕರಣ ಎಷ್ಟು ಗೊತ್ತೇ?

    ನವದೆಹಲಿ: ಎರಡು ವಾರಗಳ ಹಿಂದೆ ಬರೀ ಎರಡು ದೇಶಗಳಲ್ಲಷ್ಟೇ ಕಾಣಿಸಿಕೊಂಡಿದ್ದ ಒಮಿಕ್ರಾನ್​ ರೂಪಾಂತರಿ ವೈರಸ್ ಇದೀಗ ಜಗತ್ತಿನ 59 ರಾಷ್ಟ್ರಗಳಲ್ಲಿ ಪತ್ತೆಯಾಗಿದ್ದು, ಆತಂಕವನ್ನು ಹೆಚ್ಚಾಗಿಸಿದೆ. ದೇಶದಲ್ಲಿನ ಒಮಿಕ್ರಾನ್​ ಸ್ಥಿತಿಗತಿ ಕುರಿತು ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗರ್​ವಾಲ್​ ಈ ವಿಷಯ ತಿಳಿಸಿದರು.

    ಜಗತ್ತಿನ 59 ರಾಷ್ಟ್ರಗಳಲ್ಲಿ ಕಾಣಿಸಿಕೊಂಡಿರುವ ಒಮಿಕ್ರಾನ್​, ಇದುವರೆಗೆ ಒಟ್ಟು 2,936 ಜನರಲ್ಲಿ ದೃಢಪಟ್ಟಿದೆ. ಮತ್ತೊಂದೆಡೆ 78,054 ಮಂದಿಯ ಸ್ಯಾಂಪಲ್ ಸಂಗ್ರಹಿಸಲಾಗಿದ್ದು, ಅವರ ಜೀನೋಮ್​ ಸೀಕ್ವೆನ್ಸಿಂಗ್ ಪ್ರಕ್ರಿಯೆ ನಡೆಯುತ್ತಿದೆ ಎಂದು ಅವರು ತಿಳಿಸಿದರು.

    ಇದನ್ನೂ ಓದಿ: ಒಮಿಕ್ರಾನ್​ ಇಫೆಕ್ಟ್​, ಹೊರಬಿತ್ತು ಮತ್ತೊಂದು ಆದೇಶ; ಜ. 31ರವರೆಗೂ ಇಲ್ಲ ಅಂತಾರಾಷ್ಟ್ರೀಯ ಪ್ರಯಾಣಕ್ಕೆ ಅವಕಾಶ…

    ಭಾರತದಲ್ಲಿ ಇದುವರೆಗೆ ಒಟ್ಟು 25 ಒಮಿಕ್ರಾನ್ ಪ್ರಕರಣಗಳು ಪತ್ತೆಯಾಗಿವೆ. ಆದರೆ ಒಮಿಕ್ರಾನ್​ ಸೋಂಕಿತ ಯಾರಲ್ಲೂ ಗಂಭೀರ ರೋಗಲಕ್ಷಣಗಳು ಕಾಣಿಸಿಲ್ಲ. ಒಮಿಕ್ರಾನ್ ಸೋಂಕಿತ ಎಲ್ಲರಲ್ಲೂ ಸೌಮ್ಯವಾದ ರೋಗಲಕ್ಷಣಗಳಿವೆ. ಇನ್ನು ದೇಶದಲ್ಲಿನ ಒಟ್ಟಾರೆ ಕೋವಿಡ್ ಪ್ರಕರಣಗಳ ಪೈಕಿ ಒಮಿಕ್ರಾನ್ ಪ್ರಮಾಣ ಶೇ. 0.04 ಮಾತ್ರ ಎಂಬುದನ್ನು ಅವರು ತಿಳಿಸಿದ್ದಾರೆ.

    ಒಮಿಕ್ರಾನ್​ ಮಾರಕವಲ್ಲ ಎಂಬ ಅಭಿಪ್ರಾಯದ ಬೆನ್ನಿಗೇ ಹೊರಬಿತ್ತು ಅದು ಜಾಗತಿಕವಾಗಿ ಅಪಾಯಕಾರಿ ಎನ್ನುವ ವಿಷಯ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts