ಅಬ್ದುಲ್​ ಕಲಾಂ ಬಯೋಪಿಕ್​ ಚಿತ್ರಕ್ಕೆ ಧನುಷ್​ ಅವರೇ ಏಕೆ? ತಮಿಳು ನಟನ ಆಯ್ಕೆ ಕುರಿತು ತುಟಿಬಿಚ್ಚಿದ ಓಂ ರಾವತ್ | Om Raut

ವಿಜಯವಾಣಿ - 2025-05-30T114952.595
Published on

Om Raut: ಬಾಲಿವುಡ್​ ಅಂಗಳದಲ್ಲಿ ತೆರೆಕಂಡು ಸಿನಿಪ್ರೇಕ್ಷಕರಿಂದ ಭಾರೀ ಟೀಕೆ, ಛೀಮಾರಿಗಳನ್ನು ಸ್ವೀರಿಸಿದ್ದ 'ಆದಿಪುರುಷ' ಚಿತ್ರದ ನಿರ್ದೇಶಕ ಓಂ ರಾವತ್​, ಇದೀಗ ಭಾರತದ 'ಮಿಸೈಲ್ ಮ್ಯಾನ್'​ ಎಪಿಜೆ ಅಬ್ದುಲ್ ಕಲಾಂ ಅವರ ಜೀವಚರಿತ್ರೆಯನ್ನು ಬೆಳ್ಳಿತೆರೆಯ ಮೇಲೆ ತರಲು ಮುಂದಾಗಿದ್ದಾರೆ.

'ಆದಿಪುರುಷ' ಚಿತ್ರದ ಮೂಲಕ ಸಿನಿರಸಿಕರ ಕೆಂಗಣ್ಣಿಗೆ ಗುರಿಯಾಗಿದ್ದ ನಿರ್ದೇಶಕ ಓಂ ರಾವತ್​, ಇದೊಂದು ಸಿನಿಮಾಗೆ ಕೈಹಾಕಿ, ಭಾರೀ ಹಿನ್ನಡೆಯನ್ನು ಅನುಭವಿಸಿದ್ದರು. ಒಂದು ದೊಡ್ಡ ಸೋಲಿನಿಂದ ಗೆಲುವಿನತ್ತ ಮುಖ ಮಾಡಿರುವ ರಾವತ್​, 'ಕಲಾಂ: ದಿ ಮಿಸೈಲ್ ಮ್ಯಾನ್ ಆಫ್ ಇಂಡಿಯಾ' ಎಂಬ ಬಯೋಪಿಕ್​ ಚಿತ್ರವನ್ನು ರೂಪಿಸಲು ಇದೀಗ ಸಕಲ ತಯಾರಿಗಳನ್ನು ಮಾಡಿಕೊಂಡಿದ್ದಾರೆ. ಈಗಾಗಲೇ ಚಿತ್ರದ ಮೊದಲ ಪೋಸ್ಟರ್​ ಕೂಡ ಬಿಡುಗಡೆಗೊಳಿಸಿದ್ದು, ಕಲಾಂ ಅವರ ಪಾತ್ರಕ್ಕೆ ತಮಿಳು ನಟ ಧನುಷ್​ರನ್ನು ಆಯ್ಕೆ ಮಾಡಲಾಗಿದೆ. ಅಸಲಿಗೆ, ಧನುಷ್​ ಅವರೇ ಏಕೆ ಈ ಪಾತ್ರಕ್ಕೆ? ಎಂಬ ಪ್ರಶ್ನೆಗೆ ನಿರ್ದೇಶಕರ ಕೊಟ್ಟ ಉತ್ತರ ಹೀಗಿದೆ.

"ಡಾ. ಕಲಾಂ ಅವರ ಆಂತರಿಕ ಪ್ರಯಾಣವನ್ನು ಚಿತ್ರೀಕರಿಸುವುದು ಅತ್ಯಂತ ಸವಾಲಿನ ಅಂಶ. ಇಲ್ಲಿ ಧನುಷ್ ಅವರೇ ಏಕೆ ಎಂದರೆ, ಎಪಿಜೆ ಅಬ್ದುಲ್ ಕಲಾಂ ಅವರ ಆಧ್ಯಾತ್ಮಿಕ ಮತ್ತು ಬೌದ್ಧಿಕ ಆಳವನ್ನು ಪರದೆಯ ಮೇಲೆ ಅಚ್ಚುಕಟ್ಟಾಗಿ ತೋರಿಸಲು ಧನುಷ್‌ಗಿಂತ ಉತ್ತಮ ಆಯ್ಕೆ ಮತ್ತೊಬ್ಬರು ಇರಲು ಸಾಧ್ಯವಿಲ್ಲ. ಹೀಗಾಗಿ ಅವರನ್ನು ಆಯ್ಕೆ ಮಾಡಿದೆ. ನನ್ನ ಕಾಲೇಜು ದಿನಗಳಲ್ಲಿ, ನಾನು ಕಲಾಂ ಅವರ 'ವಿಂಗ್ಸ್ ಆಫ್ ಫೈರ್' ಕೃತಿಯನ್ನು ಓದಲು ಆಕಸ್ಮಿಕವಾಗಿ ಓದಿದೆ. ಇಂದು ನಾನು ಏನಾಗಿದ್ದೇನೋ ಅದು ಅವರ ಸ್ಫೂರ್ತಿ ಮತ್ತು ಬೋಧನೆಗಳಿಂದಲೇ. ಅವರ ಪುಸ್ತಕವು ಜೀವನದ ಬಗ್ಗೆ ನನ್ನ ದೃಷ್ಟಿಕೋನವನ್ನು ಬದಲಾಯಿಸಿತು. ಅದರಿಂದಲೇ ಇಂದು ನಾನು ಈ ಘಟ್ಟದಲ್ಲಿ ನಿಂತಿದ್ದೇನೆ" ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net