ಚಿನ್ನದ ಬೆಲೆಯಲ್ಲಿ ಕೊಂಚ ಏರಿಕೆ! ದೇಶದ ಪ್ರಮುಖ ನಗರಗಳಲ್ಲಿ ಹೀಗಿದೆ ಇಂದಿನ ಚಿನ್ನ-ಬೆಳ್ಳಿ ದರ | Gold Rates

ವಿಜಯವಾಣಿ - 2025-05-30T111550.405
Published on

Gold Rates: ಸುಂಕ ಸಮರ ಎಲ್ಲವೂ ಇದೀಗ ಶಮನಗೊಂಡಿದ್ದು, ಚಿನ್ನದ ಬೆಲೆಯೂ ಕ್ರಮೇಣವಾಗಿ ಇಳಿಕೆ ಕಾಣುತ್ತಿದೆ. ಕಳೆದ ವಾರದಲ್ಲಿ ಏರಿಳಿತ ಕಂಡಿರುವ ಚಿನ್ನದ ದರದಲ್ಲಿ ಇಂದು ಕೊಂಚ ಏರಿಕೆ ಕಂಡುಬಂದಿದೆ. ಇಂದು ಬೆಳಗ್ಗೆ ದಾಖಲಾದ ವಿವರ ಪ್ರಕಾರ, 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 270 ರೂ.ಗಳಷ್ಟು ಹೆಚ್ಚಾಗಿದೆ. ಅಲ್ಲಿಗೆ 97,310 ರೂ.ಗೆ ತಲುಪಿದೆ. 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 250 ರೂ.ನಷ್ಟು ಏರಿಕೆಯಾಗಿದ್ದು, 89,200 ರೂ.ಗೆ ಬಂದು ನಿಂತಿದೆ. ಹಾಗಿದ್ದರೆ, ದೇಶದ ಪ್ರಮುಖ ನಗರಗಳಲ್ಲಿ ಎಷ್ಟಾಗಿದೆ ಇಂದಿನ ಚಿನ್ನದ ದರ ಎಂಬುದರ ಮಾಹಿತಿ ಹೀಗಿದೆ ಗಮನಿಸಿ.

ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಬೆಲೆ

  • ನವದೆಹಲಿಯಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 89,350 ರೂ. ಆಗಿದ್ದರೆ, 24 ಕ್ಯಾರೆಟ್ ಬೆಲೆ 97,460 ರೂ. ಆಗಿದೆ.
  • ಮುಂಬೈ, ಬೆಂಗಳೂರು, ಚೆನ್ನೈ ನಗರಗಳಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 89,200 ರೂ. ಆಗಿದ್ದರೆ, 24 ಕ್ಯಾರೆಟ್ ಬೆಲೆ 97,310 ರೂ. ಆಗಿದೆ.
  • ಇನ್ನು ಹೈದರಾಬಾದ್, ವಿಜಯವಾಡ, ವಿಶಾಖಪಟ್ಟಣದಲ್ಲಿ, 22 ಕ್ಯಾರೆಟ್ ಚಿನ್ನದ 10 ಗ್ರಾಂ ಬೆಲೆ 89,200 ರೂ. ಇದ್ದರೆ, 24 ಕ್ಯಾರೆಟ್ ಬೆಲೆ 97,310 ರೂ. ಆಗಿದೆ.

ಬೆಳ್ಳಿ ಬೆಲೆ ಸ್ಥಿರ

  • ದೆಹಲಿ, ಮುಂಬೈ ಮತ್ತು ಬೆಂಗಳೂರು ನಗರಗಳಲ್ಲಿ ಒಂದು ಕೆಜಿ ಬೆಳ್ಳಿ ಬೆಲೆ 99,900 ರೂ. ಇದೆ.
  • ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿಯ ಬೆಲೆ 1,11,000 ರೂ. ಆಗಿದೆ.
  • ಹೈದರಾಬಾದ್, ವಿಜಯವಾಡ ಮತ್ತು ವಿಶಾಖಪಟ್ಟಣದಲ್ಲಿ ಒಂದು ಕೆಜಿ ಬೆಳ್ಳಿ ಬೆಲೆ 1,10,900 ರೂ. ಇದೆ,(ಏಜೆನ್ಸೀಸ್).

ನಿಮ್ಮ ಗಮನಕ್ಕೆ: ಮೇಲೆ ತಿಳಿಸಲಾದ ದರ ಇಂದು ಬೆಳಗ್ಗೆ 10 ಗಂಟೆಯವರೆಗೆ ದಾಖಲಾದ ಮಾಹಿತಿ. ಚಿನ್ನ-ಬೆಳ್ಳಿ ಬೆಲೆಗಳು ದಿನಕ್ಕೆ ಹಲವು ಬಾರಿ ಏರುಪೇರು ಆಗುತ್ತಿರುತ್ತವೆ. ನಿಖರವಾದ ಬೆಲೆಗಳಿಗಾಗಿ, ನಿಮ್ಮ ಹತ್ತಿರದ ಆಭರಣ ಮಳಿಗೆ ಅಥವಾ ಅಧಿಕೃತ ವೆಬ್​ಸೈಟ್​ ದರ ಪರಿಶೀಲಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net