ವಯಸ್ಸಾದವರಿಗೆ ಮಾರಣಾಂತಿಕವಾಗುತ್ತಿದೆ ಕರೊನಾ; ಇಂದು ಬಳ್ಳಾರಿಯಲ್ಲಿ ವೃದ್ಧ ಸಾವು

Covid-19 29 may 20
Published on

ಬಳ್ಳಾರಿ: ಇಂದು ಬಳ್ಳಾರಿಯಲ್ಲಿ ಕರೊನಾ ಸೋಂಕಿನಿಂದ 62 ವರ್ಷದ ವೃದ್ಧ ಮೃತಪಟ್ಟಿದ್ದು, ಜಿಲ್ಲೆಯಲ್ಲಿ ಇದು ಎರಡನೇ ಸಾವು.

ಈ ವೃದ್ಧ ರಾಯಚೂರಿನ ಸಿಂಧನೂರು ಮೂಲದವರು ಎನ್ನಲಾಗಿದೆ. ಒಂದು ಶಸ್ತ್ರಚಿಕಿತ್ಸೆಗಾಗಿ ವಿಮ್ಸ್​ಗೆ ದಾಖಲಾಗಿದ್ದರು. ನಿನ್ನೆ ರಾತ್ರಿ ಸಾವನ್ನಪ್ಪಿದ್ದರು.

ಮೃತ ವೃದ್ಧನ ಗಂಟಲು ದ್ರವದ ಮಾದರಿಯನ್ನು ಕರೊನಾ ಟೆಸ್ಟ್​ಗೆ ಒಳಪಡಿಸಲಾಗಿತ್ತು. ಇಂದು ವರದಿ ಬಂದಿದ್ದು, ಅದರಲ್ಲಿ ಸೋಂಕು ಇದ್ದಿದ್ದು ದೃಢಪಟ್ಟಿದೆ. ಅಂತ್ಯಕ್ರಿಯೆಯನ್ನು ಬಳ್ಳಾರಿಯಲ್ಲಿಯೇ ನಿಯಮಾನುಸಾರ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಎಸ್​.ಎಸ್​.ನಕುಲ್​ ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net