'ನಿಮಗೊಂದು ಸವಾಲು, ಈ ಫೋಟೋದಲ್ಲಿರುವುದೇನು ಗುರುತಿಸಿ..': ಬೆರಳುಗಳು ಎಂದುಕೊಂಡಿದ್ದರೆ ಅದು ತಪ್ಪು!

Photo june 15
Published on

ಸೃಷ್ಟಿ ತನ್ನೊಡಲಲ್ಲಿ ಒಳಗೊಂಡಿರುವ ವೈಶಿಷ್ಟ್ಯಗಳು ನೂರಾರು. ಇಂಥದ್ದೇ ಒಂದು ವಿಚಿತ್ರ ಫೋಟೋ ಇದು...ದಿಟ್ಟಿಸಿ ನೋಡಿ, ಸೂಕ್ಷ್ಮವಾಗಿ ನೋಡಿ...ನಿಮಗೇನೆನ್ನಿಸುತ್ತದೆ? ಇದು ಯಾವುದರ ಚಿತ್ರ ಎಂದು ನೀವಂದುಕೊಳ್ಳುತ್ತಿದ್ದೀರಿ?

ನೀವೇನಾದರೂ ಯಾವುದೋ ಪ್ರಾಣಿಯ ಪಾದ...ಅಥವಾ ಸತ್ತ ಮನನುಷ್ಯನ ಪಾದದ ಬೆರಳುಗಳು ಎಂದು ನೀವು ಭಾವಿಸುತ್ತಿದ್ದರೆ ಅದು ಅಕ್ಷರಶಃ ತಪ್ಪಾದ ಕಲ್ಪನೆ...

ಹಾಗಿದ್ದರೆ ಏನಿದು? ತಿಳಿದುಕೊಳ್ಳಲು ಮುಂದೆ ಓದಿ..

ಈ ಫೋಟೋವನ್ನು ಐಎಫ್​ಎಸ್​ ಅಧಿಕಾರಿ ಸುಸಾಂತಾ ನಂದಾ ಅವರು ತಮ್ಮ ಟ್ವಿಟರ್​ನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. ಹಾಗೇ ನೀವು ಈ ಪ್ರಾಣಿ ಯಾವುದೆಂದು ಊಹಿಸಬಲ್ಲಿರಾ ಎಂದು ಫನ್ನಿಯಾಗಿ ಕ್ಯಾಪ್ಷನ್​ ಕೊಟ್ಟಿದ್ದಾರೆ. ಅದನ್ನು ನೋಡಿದ ನೆಟ್ಟಿಗರೂ ಸಹ ಇದು ಗೋರಿಲ್ಲಾ ಕಾಲು ಎಂದು ಹೇಳಿದ್ದಾರೆ. ಕೆಲವರಂತೂ ನಮಗೆ ಇದನ್ನು ನೋಡಿದರೆ ತುಂಬ ಭಯವಾಗುತ್ತಿದೆ ಎಂದಿದ್ದಾರೆ. ಅದು ಸಹಜ ಕೂಡ. ಐದು ಬೆರಳುಗಳು, ಉಗುರುಗಳೆಲ್ಲ ಅಲ್ಲಿ ಕಾಣಿಸುವುದರಿಂದ ಗೊಂದಲ ಆಗುತ್ತದೆ.

ಆದರೆ ಸುಸಾಂತಾ ನಂದಾ ಅದೇನೆಂದು ಬಳಿಕ ಟ್ವಿಟರ್​ ಮೂಲಕವೇ ಉತ್ತರಿಸಿದ್ದಾರೆ. ಫೋಟೋದಲ್ಲಿ ಕಾಣುವುದು ಯಾವುದೇ ಪ್ರಾಣಿಯ, ಸತ್ತ ಮನುಷ್ಯನ ಪಾದ, ಬೆರಳು ಅಲ್ಲ. ಅದೊಂದು ಪ್ರಭೇದದ ಫಂಗಸ್​ ಎಂದು ಹೇಳಿದ್ದಾರೆ. ಅಂದರೆ ಅಣಬೆ ಜಾತಿಗೆ ಸೇರಿದ ಶಿಲೀಂದ್ರ. ಇದರ ಹೆಸರು ಕ್ಸಿಲೇರಿಯಾ ಪಾಲಿಮಾರ್ಫಾ. ಇವು ವಿಶ್ವದಲ್ಲೇ ಅತ್ಯಂತ ಅಪರೂಪದ ಅಣಬೆಗಳಾಗಿದ್ದು, ತಿನ್ನಲು ಸಾಧ್ಯವಿಲ್ಲ.

ನೋಡಲು ಪಾದದ ಬೆರಳುಗಳಂತೆ ಇರುವ ಕ್ಸಿಲೇರಿಯಾ ಪಾಲಿಮಾರ್ಫಾ ಅಣಬೆಗಳಿಗೆ ಸತ್ತ ಮನುಷ್ಯನ ಬೆರಳುಗಳು ಎಂಬ ಹೆಸರೂ ಇದೆ. ಈ ಅಣಬೆಗಳು ವಿವಿಧ ರೀತಿಯಲ್ಲಿ ಬೆಳೆಯುತ್ತವೆ. ತುದಿ ಯಾವಾಗಲೂ ದಪ್ಪವಾಗಿರುತ್ತದೆ. ಬೇರೆ ಬಣ್ಣಗಳನ್ನೂ ಹೊಂದಿರುತ್ತದೆ. ನೆಲಕ್ಕೆ ಬಿದ್ದಿರುವ ಮರಗಳಲ್ಲಿ ಇವು ಬೆಳೆಯುವುದು ಹೆಚ್ಚು. ಒಂದು ಗೊಂಚಲಲ್ಲಿ 3ರಿಂದ 6ವರೆಗೆ ಅಣಬೆಗಳು ಏಳುತ್ತವೆ. ಒಮ್ಮೊಮ್ಮೆ ಬಾಗುತ್ತವೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net