ಬೆಡ್​ ಬಾಕ್ಸ್​ನಲ್ಲಿ ಬಿದ್ದ 84ವರ್ಷದ ಅಜ್ಜಿ ಬದುಕುಳಿಯಲು ಕಾರಣವಾಯ್ತು ಸಿಸಿಟಿವಿ...!

Bedbox 16 Jul 20
Published on

ನವದೆಹಲಿ: ಆಕಸ್ಮಿಕವಾಗಿ ಬೆಡ್​ ಬಾಕ್ಸ್​ನಲ್ಲಿ ಸಿಲುಕಿದ್ದ 84ವರ್ಷದ ವೃದ್ಧೆಯನ್ನು ಸಿಸಿಟಿವಿ ಕ್ಯಾಮರಾ ಸಹಾಯದಿಂದ ರಕ್ಷಿಸಿದ ಘಟನೆ ದೆಹಲಿಯಲ್ಲಿ ನಡೆದಿದೆ.

ಸ್ವರ್ಶ ಕೊಹ್ಲಿ (84) ಅವರು ಈ ಅವಘಡಕ್ಕೆ ತುತ್ತಾಗಿ, ಯಶಸ್ವಿಯಾಗಿ ರಕ್ಷಿಸಲ್ಪಟ್ಟ ಅಜ್ಜಿ. ಮನೆಯಲ್ಲಿ ಹೆಚ್ಚಿಗೆ ಸಮಯ ಅಜ್ಜಿ-ಮೊಮ್ಮಗಳು ಇರುತ್ತಿದ್ದರು. ಕೆಲವೊಮ್ಮೆ ಮೊಮ್ಮಗಳೂ ಹೊರಗೆ ಹೋಗುವ ಪರಿಸ್ಥಿತಿ ಬರುತ್ತಿತ್ತು. ಹಾಗಾಗಿ ತನ್ನ ಅಜ್ಜಿಯ ಸುರಕ್ಷತೆ ದೃಷ್ಟಿಯಿಂದ ಮೊಮ್ಮಗಳು ಮನೆಯ ಒಳಗೆ ಸಿಸಿಟಿವಿ ಕ್ಯಾಮರಾ ಇನ್​​​ಸ್ಟಾಲ್​ ಮಾಡಿಸಿದ್ದಳು. ಈ ಸಿಸಿಟಿವಿ ಕ್ಯಾಮರಾವೇ ಅಜ್ಜಿಯನ್ನು ಪಾರುಮಾಡಿತು. ಇದನ್ನೂ ಓದಿ: ಜ್ವರ ಬಂತೆಂದು ಆಸ್ಪತ್ರೆಗೆ ದಾಖಲಾದ ರೋಗಿಗಳಿಬ್ಬರ ಬಿಲ್​ ಮೊತ್ತ ಕೇಳಿದ್ರೆ ಶಾಕ್​ ಆಗೋದು ಖಂಡಿತ!

ಸಿಸಿಟಿವಿ ದೃಶ್ಯಗಳು ತನ್ನ ಮೊಬೈಲ್​​ನಲ್ಲಿ ಕಾಣಿಸುವಂತೆ ಮೊಮ್ಮಗಳು ವ್ಯವಸ್ಥೆ ಮಾಡಿಕೊಂಡಿದ್ದಳು. ಗುರುವಾರ ಅಜ್ಜಿ ಯಾವುದೋ ವಸ್ತುವನ್ನು ತೆಗೆದುಕೊಳ್ಳುವುದಕ್ಕೋಸ್ಕರ್​ ಬೆಡ್​ ಬಾಕ್ಸ್​​ನ್ನು ತೆರೆದಿದ್ದರು. ಹಾಗೆ ತೆಗೆಯುತ್ತಿದ್ದಾಗ ಆಯ ತಪ್ಪಿ ಅದರಲ್ಲಿ ಬಿದ್ದರು. ಒಮ್ಮೆಲೆ ಬಾಕ್ಸ್​ ಮುಚ್ಚಿಕೊಂಡು, ಲಾಕ್​ ಆಯಿತು. ಒಳಗೆ ಇದ್ದ ಅಜ್ಜಿಗೆ ಅದರ ಭಾರವಾದ ಮುಚ್ಚಳ ತೆಗೆಯಲು ಸಾಧ್ಯವಾಗಲಿಲ್ಲ.

ತುಂಬ ಹೊತ್ತಾದರೂ ಅಜ್ಜಿ ಕಾಣದಿದ್ದಾಗ, ಅನುಮಾನಗೊಂಡ ಮೊಮ್ಮಗಳು ಮೊಬೈಲ್​ ತೆರೆದು, ಸಿಸಿಟಿವಿ ಫೂಟೇಜ್​ ನೋಡಿದಳು. ಆಗ ಅಜ್ಜಿ ಬೆಡ್​ಬಾಕ್ಸ್​​ನಲ್ಲಿ ಬಿದ್ದಿದ್ದು ಗೊತ್ತಾಯಿತು. ಇದನ್ನೂ ಓದಿ: ಇನ್ನು ಮೂರುದಿನ ನಡೆಯೋದಿಲ್ಲ ಕೊವಿಡ್​-19 ಸ್ವಾಬ್​ ಟೆಸ್ಟ್​ !

ಕೂಡಲೇ ಮೊಮ್ಮಗಳು ಪೊಲೀಸರಿಗೆ ಫೋನ್​ ಮಾಡಿ, ಅವರು ಬಂದು ಅಜ್ಜಿಯನ್ನು ರಕ್ಷಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net