More

    8 ವರ್ಷದಲ್ಲಿ ಕಟ್ಟಿದ ಸೇತುವೆ ಒಂದು ತಿಂಗಳೂ ಉಳಿಯಲಿಲ್ಲ; ಕುಸಿದುಬಿದ್ದ ಬೆನ್ನಲ್ಲೇ ಸಿಎಂ ವಿರುದ್ಧ ಆಕ್ರೋಶ

    ಪಟನಾ: ಬಿಹಾರ್​ದ ಗೋಪಾಲ್​ಗಂಜ್​ನಲ್ಲಿ ಗಂಡಕ್​ ನದಿಗೆ ಹಾಕಲಾದ ಸತ್ತರ್​ಘಾಟ್ ಸೇತುವೆ ಒಂದು ಭಾಗ ಕುಸಿದು ಬಿದ್ದಿದೆ. ಒಂದು ತಿಂಗಳ ಹಿಂದಷ್ಟೇ ಈ ಸೇತುವೆಯನ್ನು ಮುಖ್ಯಮಂತ್ರಿ ನಿತೀಶ್​ ಕುಮಾರ್​ ಅವರು ಉದ್ಘಾಟನೆ ಮಾಡಿದ್ದರು.
    ಒಂದೇ ತಿಂಗಳಲ್ಲಿ ಕುಸಿದು ಬಿದ್ದ ಸೇತುವೆಯನ್ನು ಇದೀಗ ಅಲ್ಲಿನ ರಾಜಕೀಯ ಮುಖಂಡರು ಮುಖ್ಯವಸ್ತುವನ್ನಾಗಿಟ್ಟುಕೊಂಡು, ಸರ್ಕಾರವನ್ನು ದೂಷಿಸುತ್ತಿದ್ದಾರೆ.

    ಬಿಹಾರದಲ್ಲಿ ವಿಪರೀತ ಮಳೆಯಾಗುತ್ತಿದ್ದು, ನದಿಯ ನೀರಿನ ಮಟ್ಟ ಏರುತ್ತಿದೆ. ಮಳೆ ನೀರಿನ ರಭಸಕ್ಕೆ ಈ ಸೇತುವೆಯೂ ಕೊಚ್ಚಿಕೊಂಡು ಹೋಗಿದೆ.

    ಸೇತುವೆ ಕೊಚ್ಚಿಕೊಂಡು ಹೋಗುತ್ತಿದ್ದಂತೆ ಪ್ರತಿಪಕ್ಷ ನಾಯಕ ತೇಜಸ್ವಿ ಯಾದವ್​ ಅವರು ಮುಖ್ಯಮಂತ್ರಿ ವಿರುದ್ಧ ಹರಿಹಾಯ್ದಿದ್ದಾರೆ.
    ಮುಖ್ಯ ಸತ್ತರ್​ಘಾಟ್​ ಸೇತುವೆಯಿಂದ 2 ಕಿಮೀ ದೂರದಲ್ಲಿ ಒಂದು ಭಾಗ ಕುಸಿದಿದೆ. ಇದರಿಂದ ಬ್ರಿಜ್​ಗೆ ದೊಡ್ಡ ಹಾನಿ ಏನೂ ಆಗಿಲ್ಲ ಎಂದು ರಸ್ತೆ ನಿರ್ಮಾಣ ಸಚಿವ ನಂದಕಿಶೋರ್ ಯಾದವ್​ ತಿಳಿಸಿದ್ದಾರೆ. ಇದನ್ನೂ ಓದಿ: ಕರೊನಾ ನಿಗ್ರಹಕ್ಕೆ ‘ಎರಡಲಗಿನ ಕತ್ತಿ’; ವರ್ಷಾನುಗಟ್ಟಲೇ ಸಿಗಲಿದೆ ಕೋವಿಡ್​ನಿಂದ ರಕ್ಷಣೆ

    ಈ ಸೇತುವೆ ನಿರ್ಮಾಣ ಬರೋಬ್ಬರಿ 8 ವರ್ಷ ತೆಗೆದುಕೊಂಡಿದೆ. ಕಳೆದ ತಿಂಗಳಷ್ಟೇ ಮುಖ್ಯಮಂತ್ರಿ ಸೇತುವೆ ಪೂರ್ಣಗೊಂಡು ಉದ್ಘಾಟನೆ ಮಾಡಲ್ಪಟ್ಟಿತ್ತು.

    ಈ ಸೇತುವೆಯನ್ನು 264 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಲಾಗಿತ್ತು. ಎಂಟು ವರ್ಷ ತೆಗೆದುಕೊಂಡು ಕಟ್ಟಿದ ಸೇತುವೆ 29 ದಿನಗಳೂ ಬಾಳಿಕೆ ಬರಲಿಲ್ಲ. ಇದನ್ನು ನಿರ್ಮಿಸಿದ ಕಂಪನಿಯನ್ನು ಮುಖ್ಯಮಂತ್ರಿಯವರು ಬ್ಲ್ಯಾಕ್​ಲಿಸ್ಟ್​ಗೆ ಸೇರಿಸುವ ಕ್ರಮ ಕೈಗೊಳ್ಳುತ್ತಾರಾ ಎಂದು ಆರ್​ಜೆಡಿ ನಾಯಕ ತೇಜಸ್ವಿ ಯಾದವ್​ ಪ್ರಶ್ನಿಸಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts