ವೈರಲ್ ಆಯ್ತು 80ರ ದಶಕದ ಬುಲೆಟ್ ಬೈಕ್ ಬಿಲ್; ಹಾಗಿದ್ರೆ 1986ರಲ್ಲಿ ಕ್ಲಾಸಿಕ್ 350 ಬೈಕ್​ನ ಬೆಲೆ ಎಷ್ಟಿತ್ತು?

5
Published on

ನವದೆಹಲಿ: ಕಷ್ಟ ಪಟ್ಟು ದುಡಿದ ಹಣದಲ್ಲಿ ದುಬಾರಿ ಬೆಲೆಯ ಬೈಕ್ ಖರೀದಿಸಬೇಕು... ಅದರಲ್ಲಿ ತಮ್ಮಿಷ್ಟದ ಜಾಗಕ್ಕೆ ರೈಡಿಂಗ್ ಹೋಗಬೇಕು ಎಂಬ ಕನಸು ಸಹಜವಾಗಿ ಇದ್ದೇ ಇರುತ್ತದೆ. ಅದರಲ್ಲೂ ಬುಲೆಟ್ ಬೈಕ್ ಖರೀದಿಸುವ ಬಗ್ಗೆ ಹಲವರು ಕನಸು ಕಂಡಿರುತ್ತಾರೆ. ಆದರೆ ದುಬಾರಿ ಬೆಲೆಯ ಕಾರಣ ಎಲ್ಲರಿಗೂ ಬುಲೆಟ್ ಬೈಕ್ ಖರೀದಿಸಿಲು ಸಾಧ್ಯವಾಗುವುದಿಲ್ಲ. ಹೊಸ ಬುಲೆಟ್ ಬೈಕ್ ಖರೀದಿಸಬೇಕು ಎಂದರೆ ಕನಿಷ್ಟ 1.5 ಲಕ್ಷ ರೂಪಾಯಿ ಆದ್ರೂ ಬೇಕೆ ಬೇಕು.

ರಾಯಲ್ ಎನ್​ಫೀಲ್ಡ್​ ಕಂಪೆನಿಯ ಬುಲೆಟ್ ಬೈಕ್​ಗಳ ಬಗ್ಗೆ ಬಹುತೇಕರಿಗೆ ಕ್ರೇಜ್ ಹಿಂದಿನಿಂದಲೂ ಇದೆ. 90ರ ದಶಕದಲ್ಲಿ ಬುಲೆಟ್ ಬೈಕ್ ಹೊಂದಿದವನಿಗೆ ಊರಿನಲ್ಲಿ ಹೆಚ್ಚಿನ ಗೌರವವೂ ಸಿಗುತ್ತಿತ್ತು. ಆತನನ್ನು ಶ್ರೀಮಂತ ಎಂದು ಬಣ್ಣಿಸಲಾಗುತ್ತಿತ್ತು. ಹೀಗಿರುವಾಗಿ 80ರ ದಶಕದಲ್ಲಿ ಬುಲೆಟ್ ಬೈಕ್​ನ ಬೆಲೆ ಎಷ್ಟಿದ್ದಿರಬಹುದು ಎಂಬ ಪ್ರಶ್ನೆ ಮೂಡುವುದು ಸಹಜ. ಇದಕ್ಕೆ ಉತ್ತರ ಇಲ್ಲಿದೆ.

ಇದೀಗ ಸಾಮಾಜಿಕ ಜಾಲತಾಣದಲ್ಲಿ 1986ನೇ ಇಸವಿಯ ಬುಲೆಟ್ ಬೈಕ್​ ಖರೀದಿಯ ಬಿಲ್​ನ ಫೋಟೋ ವೈರಲ್ ಆಗುತ್ತಿದೆ. 80ರ ದಶಕದಲ್ಲಿ ಭಾರತೀಯ ಕರೆನ್ಸಿಯ ಮೌಲ್ಯವು ಇಂದಿನಂತೆಯೇ ಇರಲಿಲ್ಲ. ಆ ಸಮಯದಲ್ಲಿ, ಒಂದು ರೂಪಾಯಿ ಕೂಡ ಮುಖ್ಯವಾಗಿತ್ತು ಮತ್ತು ಹೆಚ್ಚು ಮೌಲ್ಯಯುತವಾಗಿತ್ತು.

ಇದೀಗ ವೈರಲ್ ಆಗಿರುವ ಬಿಲ್​ನ ಫೋಟೋದಿಂದ 1986ರಲ್ಲಿ ಬುಲೆಟ್ ಬೈಕ್​ನ ಬೆಲೆ 18,700 ರೂ. ಇತ್ತು ಎಂಬುದನ್ನು ತಿಳಿದುಕೊಳ್ಳಬಹುದು. ಇಂದಿನ ಬುಲೆಟ್ ಬೈಕ್​ನ ಬೆಲೆ 1.5 - 3.00 ಲಕ್ಷ ರೂ.ನಷ್ಟು. ವೈರಲ್ ಆಗಿರುವ ಬಿಲ್​ನಲ್ಲಿ ಜಾರ್ಖಂಡ್‌ನ ಬೊಕಾರೊ ಸ್ಟೀಲ್ ಸಿಟಿಯಿಂದ ರಾಯಲ್ ಎನ್‌ಫೀಲ್ಡ್ ಬುಲೆಟ್ 350cc ಬೈಕ್ ಖರೀದಿಯಾಗಿದೆ ಎಂದು ತಿಳಿಯಬಹುದು. ಇದೀಗ ಬುಲೆಟ್ ಬೈಕ್ ಪ್ರಿಯರು ಇಂದಿನ ಬೆಲೆಯನ್ನು ಅಂದಿನ ಬೆಲೆಗೆ ಹೋಲಿಕೆ ಮಾಡುತ್ತಿದ್ದಾರೆ.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net