ರೇಗಿಸಿದವನಿಗೆ ನಡುರಸ್ತೆಯಲ್ಲೇ ಕಪಾಳಕ್ಕೆ ಬಾರಿಸಿದ ವಿದ್ಯಾರ್ಥಿನಿ! ಕಾಲಿಗೆ ಬಿದ್ದು ಬೇಡಿಕೊಂಡ ಯುವಕ

College Student
Published on

ಭುವನೇಶ್ವರ್​: ತನ್ನನ್ನು ರೇಗಿಸಿದ ಯುವಕನಿಗೆ ಕಾಲೇಜು ವಿದ್ಯಾರ್ಥಿನಿಯೊಬ್ಬಳು ಸಾರ್ವಜನಿಕವಾಗಿ ಕಪಾಳಕ್ಕೆ ಬಾರಿಸಿದ ಘಟನೆ ಒಡಿಶಾದ ಅಂಗುಲ್​ ಜಿಲ್ಲೆಯ ಪಲ್ಲಹಾರ ಬ್ಲಾಕ್​ನ ಖಾಮರ್​ ಏರಿಯಾದಲ್ಲಿ ಇತ್ತೀಚೆಗೆ ನಡೆದಿದೆ.

ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ವರದಿಗಳ ಪ್ರಕಾರ ಕಾಲೇಜು ವಿದ್ಯಾರ್ಥಿಯನ್ನು ನೋಡಿ ಸ್ಥಳೀಯ ಯುವಕ ಕೆಲ ಅಶ್ಲೀಲ ಕಾಮೆಂಟ್​ ಮಾಡಿದ್ದು, ಇದರಿಂದ ಸಿಟ್ಟಿಗೆದ್ದ ಹುಡುಗಿ ಯುವಕನ ವಿರುದ್ಧ ಪ್ರತಿಭಟಿಸಿ, ಆತನ ಕಪಾಳಕ್ಕೆ ನಡುರಸ್ತೆಯಲ್ಲೇ ಬಾರಿಸಿದ್ದಾಳೆ.

ಮಹಿಳೆಯರ ಜೊತೆ ಸರಿಯಾಗಿ ನಡೆದುಕೊಳ್ಳುವಂತೆ ಯುವಕನಿಗೆ ಹುಡುಗಿ ಬುದ್ಧಿ ಮಾತು ಹೇಳಿದ್ದಾಳೆ. ಇನ್ನೊಂದೆಡೆ ಯುವಕ ಸಾರ್ವಜನಿಕವಾಗಿ ಕಪಾಳಕ್ಕೆ ಬಾರಿಸದಂತೆ ಹುಡುಗಿಯ ಬಳಿ ಮನವಿ ಮಾಡಿಕೊಂಡಿರುವುದು ವಿಡಿಯೋದಲ್ಲಿದೆ. ಅಲ್ಲದೆ, ಹುಡುಗಿಯ ಕಾಲಿಗೆ ಬೇಡಿಕೊಳ್ಳುತ್ತಿರುವುದು ಸಹ ವಿಡಿಯೋದಲ್ಲಿ ರೆಕಾರ್ಡ್​ ಆಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net