ಅನುಮಾನಾಸ್ಪದ ವರ್ತನೆ: ಅವಮಾನಕ್ಕೆ ಪ್ರತೀಕಾರವಾಗಿ ನಡೆಯಿತಾ ಕೊಲೆ?

murder
Published on

ಆಗ್ರಾ: ಉತ್ತರ ಪ್ರದೇಶದ ಇಟಾ ಜಿಲ್ಲೆಯ ಹಳ್ಳಿಯೊಂದರಲ್ಲಿ 20 ವರ್ಷದ ಯುವಕನೊಬ್ಬ ತನ್ನ ಸಂಬಂಧಿಯನ್ನು ಥಳಿಸಿ ಕೊಲೆ ಮಾಡಿದ್ದಾನೆ.

ಪಿಲುವಾ ಪೊಲೀಸ್ ಠಾಣೆಯ ಪ್ರಾದೇಶಿಕ ವ್ಯಾಪ್ತಿಯಲ್ಲಿರುವ ಜವಾಹರಪುರ ಗ್ರಾಮದಲ್ಲಿ ಗುರುವಾರ ಈ ಘಟನೆ ನಡೆದಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಮೊಹಮ್ಮದ್ ಹಸೀನ್ ಮೃತ ಪಟ್ಟ ಯುವಕ. ಒಂದು ವಾರದ ಹಿಂದೆ ಆತ ತನ್ನ ಸಹೋದರಿ ಮತ್ತು ಸಂಬಂಧಿ ಮೊಹಮ್ಮದ್ ಫೈಜಾನ್ ಅವರನ್ನು ಆಕ್ಷೇಪಾರ್ಹ ರೀತಿಯಲ್ಲಿದ್ದುದನ್ನು ನೋಡಿದ್ದ. ಆದ್ದರಿಂದ ಆತ ಫೈಜಾನ್ ನನ್ನು ಹೊಡೆದ.

ಗುರುವಾರ ಬೆಳಿಗ್ಗೆ, ಫೈಜಾನ್ ಹಸೀನ್ ಮನೆಗೆ ಬಂದು ಹೊರಗೆ ಕರೆದ. ಹಸೀನ್ ಆತನನ್ನು ಭೇಟಿಯಾಗಲು ಹೊರಬರುತ್ತಿದ್ದಂತೆ, ಫೈಜಾನ್ ಆತನಿಗೆ ಹೊಡೆದ. ತಕ್ಷಣ ಹಸೀನ್​​ನನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಆದರೆ ಅಷ್ಟೊತ್ತಿಗಾಗಲೇ ಆತ ಮೃತಪಟ್ಟಿದ್ದ.

ಆರೋಪಿಯನ್ನು ಬಂಧಿಸಲಾಗಿದೆ ಪೊಲೀಸರು ಬಂಧಿಸಿದ್ದಾರೆ. ಕೊಲೆ ಪ್ರಕರಣ ದಾಖಲಿಸಲಾಗಿದೆ.

ಹಸೀನ್ ಫೈಜಾನ್​ಗೆ ಹೊಡೆದದ್ದರಿಂದ ಅವಮಾನಿತನಾದ ಫೈಜಾನ್ ಸೇಡು ತೀರಿಸಿಕೊಳ್ಳಲು ಈ ಕೃತ್ಯವೆಸಗಿರಬಹುದೆಂದು ಪೊಲೀಸರು ಸಂಶಯಿಸಿದ್ದಾರೆ.

ಅವಮಾನಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಅವನು ಅವನನ್ನು ಕೊಲೆ ಮಾಡಿರಬಹುದು. ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net