More

    ಅಮಲೇರಿದ ಕೋವಿಡ್ ರೋಗಿಯಿಂದ ಆಸ್ಪತ್ರೆಯಲ್ಲಿ ದಾಂಧಲೆ : ಮದ್ಯ ಪೂರೈಸಿದ್ದು ಯಾರು ಗೊತ್ತಾ?

    ಚೆನ್ನೈ: ತಮಿಳುನಾಡಿನ ಕಡಲೂರು ಜಿಲ್ಲೆಯ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕರೊನಾ ಸೋಂಕಿತ ಪತಿಗೆ ಮದ್ಯ ಪೂರೈಸಿದ ಆರೋಪದ ಮೇಲೆ 38 ವರ್ಷದ ಮಹಿಳೆ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
    ಪತಿ ಕುಡಿದ ನಂತರ ಆಸ್ಪತ್ರೆಯಲ್ಲಿ ದಾಂಧಲೆ ನಡೆಸಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಆಗಸ್ಟ್ 12 ರಂದು ಚಿದಂಬರಂನ ರಾಜಾ ಮುಥಯ್ಯ ವೈದ್ಯಕೀಯ ಕಾಲೇಜಿನಲ್ಲಿ ಈ ಘಟನೆ ನಡೆದಿದೆ. ಟಿ ಮುತ್ತುಕುಮಾರನ್ (48) ಗೆ ಒಂದು ವಾರದ ಹಿಂದೆ ಸೋಂಕು ದೃಢ ಪಟ್ಟ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬುಧವಾರ, ಆತನ ಪತ್ನಿ ಎಂ ಕಲೈಮಂಗೈ ಆಸ್ಪತ್ರೆಗೆ ಭೇಟಿ ನೀಡಿ, ಆತನಿಗೆ ಆಹಾರದ ಚೀಲವನ್ನು ನೀಡಿದಳು. ಅದರಲ್ಲಿದ್ದ ಮದ್ಯ ಸೇವಿಸಿದ ಆತ ಆಸ್ಪತ್ರೆಯ ವಾರ್ಡ್‌ನಲ್ಲಿ ದಾಂಧಲೆ ನಡೆಸಿದ.

    ಇದನ್ನೂ ಓದಿ : ಲಿವ್-ಇನ್ ಸಂಬಂಧ ಕೊಲೆಯಲ್ಲಿ ಅಂತ್ಯಗೊಂಡದ್ದೇಕೆ?

    ತೊಂದರೆಗೀಡಾದ ಇತರ ರೋಗಿಗಳು ಆಸ್ಪತ್ರೆಯ ಆಡಳಿತಕ್ಕೆ ಈ ಬಗ್ಗೆ ಮಾಹಿತಿ ನೀಡಿದರು. ಮಾಹಿತಿ ಸಿಕ್ಕ ನಂತರ ಆಸ್ಪತ್ರೆಯ ಸಿಬ್ಬಂದಿ ಮತ್ತು ಗ್ರಾಮ ಆಡಳಿತಾಧಿಕಾರಿ ಅಲ್ಲಿಗೆ ಬಂದಾಗ ಆತ ಮದ್ಯ ಸೇವಿಸಿರುವುದು ಕಂಡುಬಂತು. ಅವನ ಹೆಂಡತಿ ಅವನಿಗೆ ನೀಡಿದ ಆಹಾರ ಚೀಲದಲ್ಲಿ ಮದ್ಯದ ಬಾಟಲಿ ಇರುವುದು ವಿಚಾರಣೆಯಲ್ಲಿ ತಿಳಿದುಬಂದಿದೆ. ವಿಎಒ ಚಿದಂಬರಂ ಅಣ್ಣಾಮಲೈ ನಗರ ಪೊಲೀಸರನ್ನು ಸಂಪರ್ಕಿಸಿ ದೂರು ದಾಖಲಿಸಿದರು.
    ವಿಎಒ ದೂರಿನ ಆಧಾರದ ಮೇಲೆ, ಪೊಲೀಸರು ಮುತ್ತುಕುಮಾರನ್ ನ ಪತ್ನಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ತನಿಖೆ ಮುಂದುವರಿದಿದೆ.

    ಕರೊನಾ ಸಂಕಷ್ಟದ ನಡುವೆಯೇ ಮುಂಗಾರು ಅಧಿವೇಶನ; ಸಂಸತ್​ ಕಲಾಪಕ್ಕೆ ನಡೆಯುತ್ತಿರುವ ಸಿದ್ಧತೆ ಹೇಗಿದೆ ಗೊತ್ತೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts