ಕಾನೂನು ಸಲಹೆ: ವಿಲ್ ಬದಲಾವಣೆ ಮಾಡಲು ಸಾಧ್ಯವೆ?

nyaya-juneweb1
Published on
ಪ್ರಶ್ನೆ: ನನ್ನ ನಾನು ನನ್ನ ಸ್ವಯಾರ್ಜಿತ ಆಸ್ತಿಯನ್ನು ನನ್ನ ಹೆಂಡತಿ ಮತ್ತು ಮಕ್ಕಳಿಗೆ ಎಂಟು ವರ್ಷಗಳ ಹಿಂದೆ ನನ್ನ ಇಷ್ಟದಂತೆ ಹಂಚಿ ರಿಜಿಸ್ಟರ್ಡ್ ವಿಲ್ ಮಾಡಿದ್ದೆ. ನನ್ನ ಹೆಂಡತಿ ಕಳೆದ ವರ್ಷ ತೀರಿಕೊಂಡಿದ್ದಾಳೆ. ಈ ಮಧ್ಯೆ ನಾನು ಒಂದು ಆಸ್ತಿಯನ್ನು ಮಾರಿ ಇಬ್ಬರು ಮಕ್ಕಳಿಗೆ ಮಾತ್ರ ಹಣ ಕೊಟ್ಟೆ. ಈಗ ನಾನು ವಿಲ್ ಬದಲಾವಣೆ ಮಾಡಬೇಕಿದೆ. ಕೋಡಿಸಲ್ ಮಾಡಲೇ ಅಥವಾ ಬೇರೆ ವಿಲ್ ಮಾಡಲೇ ತಿಳಿಸಿ. ಹಳೆಯ ವಿಲ್‍ನಂತೆಯೇ ಆಗಬೇಕೆಂದು ನನ್ನ ಬೇರೆ ಮಕ್ಕಳು ಮುಂದೆ ಗಲಾಟೆ ಮಾಡಿದರೆ ಎನ್ನುವ ಚಿಂತೆ ಆಗುತ್ತಿದೆ.

ಉತ್ತರ: ಈ ಹಿಂದೆ ಮಾಡಿದ್ದ ವಿಲ್ಲನ್ನು ರದ್ದು ಮಾಡಿ ಹೊಸದಾಗಿ ವಿಲ್ ಮಾಡಿಸಿ ನೋಂದಾಯಿಸುವುದು ಒಳ್ಳೆಯದು. ಹೊಸದಾಗಿ ವಿಲ್ ಮಾಡುವಾಗ ಬದಲಾದ ಸಂದರ್ಭಗಳನ್ನು ವಿವರವಾಗಿ ತಿಳಿಸಿ. ಹಳೆಯ ವಿಲ್ಲನ್ನು ರದ್ದು ಮಾಡಿರುವುದಾಗಿ ಖಚಿತವಾಗಿ ತಿಳಿಸಿ. ಯಾವುದೇ ವ್ಯಕ್ತಿ ಹಿಂದೆ ಮಾಡಿದ್ದ ವಿಲ್ನಲ್ಲಿ ಹಲವಾರು ಮಾರ್ಪಾಟುಗಳನ್ನು ತರುವ ಸಂದರ್ಭದಲ್ಲಿ ಕೋಡಿಸಿಲ್ ಮಾಡುವುದಕ್ಕಿಂತ ಹೊಸ ವಿಲ್ ಬರೆಸುವುದೇ ಉತ್ತಮ. ಏನೇ ಅಗಲಿ ನಿಮ್ಮ ಅಂತಿಮವಾದ ವಿಲ್ ಮಾತ್ರ ಊರ್ಜಿತವಾಗುತ್ತದೆ. ನೀವು ಹಳೆಯ ವಿಲ್ ಬಗ್ಗೆ ಚಿಂತಿಸಬೇಕಾಗಿಲ್ಲ.

ಸೂಚನೆ: ಕಾನೂನಿಗೆ ಸಂಬಂಧಿಸಿದ ನಿಮ್ಮ ಪ್ರಶ್ನೆಗಳನ್ನು susheelasarathi@yahoo.co.in ಅಥವಾ lalitha.vijayavani@gmail.com ಗೆ ಕಳುಹಿಸಬಹುದು. (ಕೋರ್ಟ್‌ಗಳಲ್ಲಿ ಇತ್ಯರ್ಥಕ್ಕೆ  ಬಾಕಿ ಇರುವ ಪ್ರಕರಣಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ದಯವಿಟ್ಟು ಕೇಳಬೇಡಿ)

ದಾಂಪತ್ಯದಲ್ಲಿ ಸಮರಸ ಮೂಡುವುದು ಹೇಗೆ ಎಂಬ ಕುರಿತಾಗಿ ಎಸ್​.ಸುಶೀಲಾ ಚಿಂತಾಮಣಿಯವರು ತಿಳಿಸಿರುವ ವಿಡಿಯೋಗಾಗಿ ಇಲ್ಲಿ ಕ್ಲಿಕ್ಕಿಸಿ. ವಿಷಯ 'ಟ್ರಾವಲ್​'

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net