More

    ಹೆಂಡತಿಯನ್ನು ಆಕೆ ಪಾಲಕರು ಬಿಡ್ತಿಲ್ಲ, ಕರೆಸಿಕೊಳ್ಳೋದು ಹೇಗೆ?

    ಹೆಂಡತಿಯನ್ನು ಆಕೆ ಪಾಲಕರು ಬಿಡ್ತಿಲ್ಲ, ಕರೆಸಿಕೊಳ್ಳೋದು ಹೇಗೆ?

    ಪ್ರಶ್ನೆ: ನಾನು ಮತ್ತು ನನ್ನ ಹೆಂಡತಿ ಇಬ್ಬರೂ ಸರ್ಕಾರೀ ನೌಕರರು. ನಮಗೆ ಮದುವೆಯಾಗಿ 5 ವರ್ಷ ಆಗಿದೆ. ಒಂದು ಮಗು ಇದೆ. ನಾವಿಬ್ಬರೂ ಬೇರೆ ಬೇರೆ ಕಡೆ ಕೆಲಸ ಮಾಡುತ್ತಿರುವುದರಿಂದ, ಮದುವೆ ಆದಾಗಲಿನಿಂದ ನನ್ನ ಹೆಂಡತಿಯ ತಂದೆ ತಾಯಿ ಅವಳನ್ನು ನಮ್ಮ ಊರಿಗೆ ಕಳಿಸುತ್ತಿಲ್ಲ. ನಮ್ಮ ಊರಿಗೆ ವರ್ಗಾವಣೆ ಮಾಡಿಸಿಕೊಳ್ಳಲು ಅವಳು ಒಪ್ಪುತ್ತಿಲ್ಲ. ನಗರದಲ್ಲಿ ಮನೆ ಮಾಡಿ ಅವಳನ್ನು ಕರೆದುಕೊಂಡು ಹೋಗಿ ಎನ್ನುತ್ತಿದ್ದಾರೆ. ನಮ್ಮ ತಂದೆಗೆ ತುಂಬಾ ವಯಸ್ಸಾಗಿದೆ. ಮೊಮ್ಮಗನ ಜೊತೆ ಆಡಬೇಕೆಂಬ ನನ್ನ ತಂದೆ ತಾಯಿಯ ಆಸೆ ಈಡೇರಿಸಲು ಆಗುತ್ತಿಲ್ಲ. ನನ್ನ ಹಂಡತಿ ಮತ್ತು ನನ್ನ ಮಗುವನ್ನು ಕರೆದುಕೊಂಡು ಬರಲು ಇರುವ ಕಾನೂನು ಪರಿಹಾರ ತಿಳಿಸಿ.

    ಉತ್ತರ: ನೀವು, ನಿಮ್ಮ ಪತ್ನಿ ಬಂದು ನಿಮ್ಮ ಜತೆ ದಾಂಪತ್ಯ ಜೀವನ ನಡೆಸಬೇಕೆಂದು “ರೆಸ್ಟಿಟ್ಯೂಷನ್ ಆಫ್ ಕಾಂಜುಗಲ್ ರೈಟ್ಸ್” ಆದೇಶ ಕೋರಿ ಪ್ರಕರಣವನ್ನು ದಾಖಲಿಸಬಹುದು. ಆ ಪ್ರಕರಣದಲ್ಲಿ ನೋಟೀಸು ಜಾರಿ ಆದ ಮೇಲೆ ಪ್ಕರಣವನ್ನು ಮಧ್ಯಸ್ಥಿಕೆಗೆ ಕಳಿಸಲು ಕೇಳಿಕೊಳ್ಳಿ. ಅಲ್ಲಿ ಇಬ್ಬರೂ ಕೂತು ಮಾತಾಡಿ ರಾಜೀ ಸೂತ್ರಕ್ಕೆ ಬರಬಹುದು.

    ಒಂದು ವೇಳೆ ಆಕೆ ಒಪ್ಪದಿದ್ದರೆ ಪ್ರಕರಣ ಮುಂದುವರೆಸಿ. ಆದರೆ ನೀವು ಗೆದ್ದರೂ ಆಕೆ ಬಂದು ನಿಮ್ಮ ಜೊತೆಗೆ ಇರುವ ಸಾಧ್ಯತೆ ಕಡಿಮೆ ಎನ್ನುವುದಾದರೆ, ಅಪೀಲು ಹಾಕುತ್ತಾ ವರ್ಷಗಳನ್ನು ತಳ್ಳುವುದಾದರೆ, ನಿಮಗೆ ಯಾವ ಪ್ರಯೋಜನವೂ ವಾಸ್ತವಿಕವಾಗಿ ಆಗುವುದಿಲ್ಲ. ಅದಕ್ಕೆ ಬದಲಿಗೆ ಕೂತು ಮಾತಾಡುವುದೇ ಉತ್ತಮ. ನೀವು ನಿಮ್ಮ ತಂದೆ ತಾಯಿಯನ್ನು ಬಿಟ್ಟು ಬರಲು ಇಷ್ಟ ಪಡದಂತೆ , ಆಕೆಯೂ ತನ್ನ ತಂದೆ ತಾಯಿಯಿಂದ ದೂರ ಇರಲು , ಅಥವಾ ನಿಮ್ಮ ತಂದೆ ತಾಯಿಯ ಜೊತೆ ಇರಲು ಇಷ್ಟ ಪಡದೇ ಇರಬಹುದು.

    ನಿಮ್ಮನ್ನು ಅವರ ತಂದೆ ತಾಯಿಯ ಜೊತೆ ಹೋಗಿರಿ ಎಂದಾಗಲೀ ಅವರನ್ನು ನಿಮ್ಮ ತಂದೆಯ ಜೊತೆ ಇರಬೇಕು ಎಂದಾಗಲೀ ಒತ್ತಾಯ ಮಾಡಲಾಗುವುದಿಲ್ಲ. ಈ ಸಮಸ್ಯೆಗೆ ಒಂದು ಮಧ್ಯದಾರಿಯನ್ನು ಕಂಡುಕೊಳ್ಳುವುದು ಒಳ್ಳೆಯದು. ನಿಮ್ಮ ಪತ್ನಿ ಇರುವ ತಾಲ್ಲೂಕಿನ ಮಧ್ಯಸ್ಥಿಕೆ ಕೇಂದ್ರಕ್ಕೆ , ವ್ಯಾಜ್ಯ ಪೂರ್ವ ಮಧ್ಯಸ್ಥಿಕೆಗೆ ಅರ್ಜಿ ಕೊಡಿ. ಇಬ್ಬರನ್ನೂ ಕರೆಯಿಸಿ ಯಾವುದಾದರೂ ಒಂದು ಸೂತ್ರ ಕಂಡುಕೊಳ್ಳಲು ನಿಮಗೆ ಸಹಾಯ ಒದಗಿಸುತ್ತಾರೆ. ದಾಂಪತ್ಯ ಜೀವನದ ಪ್ರತಿ ಸಮಸ್ಯೆಗೂ ಕೇಸು ಹಾಕಿಯೇ ಪರಿಹಾರ ಪಡೆಯಬೇಕಿಲ್ಲ.

    ರಾಜಿ ಸೂತ್ರಕ್ಕೆ ಆಕೆ ಒಪ್ಪದಿದ್ದರೆ, ನೀವು ಮಗುವನ್ನು ಭೇಟಿ ಮಾಡಲು ಅದನ್ನು ಆಗಾಗ್ಗೆ ನಿಮ್ಮ ಊರಿಗೆ ಕರೆತರಲು ಅವಕಾಶ ಮಾಡಿಕೊಡುವಂತೆ ಅರ್ಜಿ ಹಾಕಿ. ನ್ಯಾಯಾಲಯದ ಆದೇಶದ ಮೂಲಕ ಆಗಾಗ ಮಗುವನ್ನು ಕರೆತಂದು ನಿಮ್ಮ ತಂದೆ ತಾಯಿಯ ಜೊತೆ ಮಗು ಸಮಯ ಕಳೆಯುವಂತೆ ಮಾಡಬಹುದು.

    ಸೂಚನೆ: ಕಾನೂನಿಗೆ ಸಂಬಂಧಿಸಿದ ನಿಮ್ಮ ಪ್ರಶ್ನೆಗಳನ್ನು [email protected] ಅಥವಾ [email protected] ಗೆ ಕಳುಹಿಸಬಹುದು. (ಕೋರ್ಟ್‌ಗಳಲ್ಲಿ ಇತ್ಯರ್ಥಕ್ಕೆ  ಬಾಕಿ ಇರುವ ಪ್ರಕರಣಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ದಯವಿಟ್ಟು ಕೇಳಬೇಡಿ)

    ದಾಂಪತ್ಯದಲ್ಲಿ ಸಮರಸ ಮೂಡುವುದು ಹೇಗೆ ಎಂಬ ಕುರಿತಾಗಿ ಎಸ್​.ಸುಶೀಲಾ ಚಿಂತಾಮಣಿಯವರು ತಿಳಿಸಿರುವ ವಿಡಿಯೋಗಾಗಿ ಇಲ್ಲಿ ಕ್ಲಿಕ್ಕಿಸಿ. ವಿಷಯ ‘ಪ್ರೀತಿಯ ದರ್ಶನ

    ಕಾನೂನು ಸಲಹೆ: ಅಮ್ಮನಿಗಾಗಿ ಮದ್ವೆಯಾಗಿ ನಂತರ ವಿಚ್ಛೇದನ ಕೊಡಬಹುದೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts