ಕಾನೂನು ಸಲಹೆ: ಅಮ್ಮನಿಗಾಗಿ ಮದ್ವೆಯಾಗಿ ನಂತರ ವಿಚ್ಛೇದನ ಕೊಡಬಹುದೆ?

nyayadevate
Published on

ಪ್ರಶ್ನೆ: ನಮ್ಮ ಅಕ್ಕನ ಮಗಳನ್ನು ಮದುವೆ ಆಗು ಎಂದು ನಮ್ಮ ಮನೆಯಲ್ಲಿ ಬಲವಂತ ಮಾಡುತ್ತಿದ್ದಾರೆ. ನನಗೆ ಅದು ಇಷ್ಟವಿಲ್ಲ. ಆ ಹುಡುಗಿಗೂ ಇಷ್ಟವಿಲ್ಲ. ನಮ್ಮ ತಾಯಿ ಖಾಯಿಲೆ ಮಲಗಿದ್ದಾರೆ. ಅವರು ಸಾಯುವ ಮುಂಚೆ ಮದುವೆ ಆಗಬೇಕೆಂದು ಹಠ ಹಿಡಿದಿದ್ದಾರೆ. ನಮ್ಮ ಅಕ್ಕನ ಮಗಳು ಈಗ ಸಧ್ಯಕ್ಕೆ ಮದುವೆ ಆಗೋಣ ಆ ಮೇಲೆ ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನ ಪಡೆಯೋಣ ಎನ್ನುತ್ತಿದ್ದಾಳೆ. ಹಾಗೆ ಮಾಡಲು ಕಾನೂನಿನಲ್ಲಿ ತೊಂದರೆ ಇದೆಯೇ?

ಉತ್ತರ: ನೀವಿಬ್ಬರೂ ಒಪ್ಪಿ ಮದುವೆ ಆಗುವುದಕ್ಕೆ ಅಥವಾ ನೀವಿಬ್ಬರೂ ಒಪ್ಪಿ ವಿಚ್ಛೇದನ ಪಡೆಯುವುದಕ್ಕೆ ಕಾನೂನಿನಲ್ಲಿ ಯಾವ ತೊಂದರೆಯೂ ಇಲ್ಲ.

ಆದರೆ ಇಬ್ಬರಿಗೂ ಇಷ್ಟವಿಲ್ಲದ ಮದುವೆಯನ್ನು ಮಾಡಿಕೊಂಡು ಮುಂದೆ ಯಾವ ಯಾವ ತೊಂದರೆಗಳನ್ನು ಎದುರಿಸಬೇಕಾಗುತ್ತದೆ ಎನ್ನುವುದನ್ನು ಯಾರೂ ಹೇಳಲಾಗುವುದಿಲ್ಲ. ಮದುವೆ ಆ ಮೇಲೆ ನಿಮ್ಮ ಅಕ್ಕನ ಮಗಳು ವಿಚ್ಛೇದನಕ್ಕೆ ಒಪ್ಪದಿದ್ದರೆ ಆಗ ಏನು ಮಾಡುತ್ತೀರಿ. ನಿಮ್ಮ ತಾಯಿಯ ಮೇಲಿನ ನಿಮ್ಮ ಪ್ರೀತಿಯನ್ನು , ನಿಮಗೆ ಇಷ್ಟವಿಲ್ಲದವರ ಜತೆ ಮದುವೆ ಆಗಿ ನೀವು ತೋರಿಸಬೇಕಾಗಿಲ್ಲ ಎಂದು ತಿಳಿದುಕೊಳ್ಳಿ.

(ಅಂಕಣಕಾರರು ಹಿರಿಯ ವಕೀಲೆ ಹಾಗೂ ಮಧ್ಯಸ್ಥಿಕೆಗಾರರು)

ಸೂಚನೆ: ಕಾನೂನಿಗೆ ಸಂಬಂಧಿಸಿದ ನಿಮ್ಮ ಪ್ರಶ್ನೆಗಳನ್ನು susheelasarathi@yahoo.co.in ಅಥವಾ lalitha.vijayavani@gmail.com ಗೆ ಕಳುಹಿಸಬಹುದು. (ಕೋರ್ಟ್‌ಗಳಲ್ಲಿ ಇತ್ಯರ್ಥಕ್ಕೆ  ಬಾಕಿ ಇರುವ ಪ್ರಕರಣಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ದಯವಿಟ್ಟು ಕೇಳಬೇಡಿ) ಅಂತರ್ಜಾತಿ ವಿವಾಹದ ಕುರಿತು ಎಸ್.ಸುಶೀಲಾ ಚಿಂತಾಮಣಿ ಅವರು ತಿಳಿಸಿರುವ 'ದಾಂಪತ್ಯದ ಹೊನಲು' ಚಾನೆಲನ್ನು ಈ ಲಿಂಕ್ ನಲ್ಲಿ ವೀಕ್ಷಿಸಿ:

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net