More

    ಕಾನೂನು ಸಲಹೆ: ತಾಳಿ ಕಿತ್ತುಕೊಟ್ಟು ಹೋದ ಹೆಂಡತಿ ವಾಪಸ್‌ ಬರದಿದ್ದರೆ ಮರು ಮದುವೆಯಾಗಬಹುದೆ?

    ಕಾನೂನು ಸಲಹೆ: ತಾಳಿ ಕಿತ್ತುಕೊಟ್ಟು ಹೋದ ಹೆಂಡತಿ ವಾಪಸ್‌ ಬರದಿದ್ದರೆ ಮರು ಮದುವೆಯಾಗಬಹುದೆ?

    ಪ್ರಶ್ನೆ: ನಮ್ಮ ಅಣ್ಣನ ಹೆಂಡತಿ ಮದುವೆಯಾದ ನಾಲ್ಕು ತಿಂಗಳಲ್ಲಿ ನಮ್ಮ ಅಣ್ಣನನ್ನು ಬಿಟ್ಟು ಹೋದವಳು ಈ ಕಡೆಗೇ ಬಂದಿಲ್ಲ. ತಾಳಿ ಕಿತ್ತುಕೊಟ್ಟು ನನಗೂ ನಿನಗೂ ಯಾವ ಸಂಬಂಧವೂ ಇಲ್ಲ ಎಂದು ಹೇಳಿ ಹೋಗಿದ್ದಾಳೆ. ಈಗ ನಮ್ಮ ಅಣ್ಣ ಇನ್ನೊಂದು ಮದುವೆ ಆಗಬಹುದೇ?

    ಉತ್ತರ : ತಾಳಿ ವಿವಾಹದಲ್ಲಿ ಒಂದು ಸಾಂಕೇತಿಕ ಅಂಶ . ತಾಳಿ ತೆಗೆದು ಕೊಟ್ಟ ಮಾತ್ರಕ್ಕೆ ನಿಮ್ಮ ಅತ್ತಿಗೆ ಮತ್ತು ನಿಮ್ಮ ಅಣ್ಣನ ಮಧ್ಯೆ ಇರುವ ವೈವಾಹಿಕ ಸಂಬಂಧ ಕೊನೆಯಾಗುವುದಿಲ್ಲ. ನಿಮ್ಮ ಅಣ್ಣ ನಿಮ್ಮ ಅತ್ತಿಗೆಯಿಂದ ವಿಚ್ಛೇದನ ಪಡೆದೇ ಇನ್ನೊಂದು ಮದುವೆ ಆಗಬೇಕು.

    ಮೊದಲಿಗೆ ನಿಮ್ಮ ಅಣ್ಣನಿಗೆ ತಮ್ಮ ತಾಲ್ಲೂಕಿನ ಮಧ್ಯಸ್ಥಿಕೆ ಕೇಂದ್ರದಲ್ಲಿ ವ್ಯಾಜ್ಯ ಪೂರ್ವ ಮಧ್ಯಸ್ಥಿಕೆಗೆ ಅರ್ಜಿ ಕೊಡಲು ತಿಳಿಸಿ. ಅಲ್ಲಿಯ ಅಧಿಕಾರಿಗಳು ನಿಮ್ಮ ಅತ್ತಿಗೆಯನ್ನೂ ನಿಮ್ಮ ಅಣ್ಣನನ್ನೂ ಕರೆಯಿಸಿ ಮಧ್ಯಸ್ಥಿಕೆಗಾರರ ಸಹಾಯದಿಂದ ಮಧ್ಯಸ್ಥಿಕೆ ಮಾಡುತ್ತಾರೆ. ಅಲ್ಲಿ ನಿಮ್ಮ ಅತ್ತಿಗೆ ಒಪ್ಪಿದರೆ ಆ ನಂತರ ನಿಮ್ಮ ಅಣ್ಣ ಮತ್ತು ಅತ್ತಿಗೆ ಇಬ್ಬರೂ ಸೇರಿ ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನ ಪಡೆಯಲು ಅರ್ಜಿ ಹಾಕಿ ಸುಲಭವಾಗಿ ವಿಚ್ಛೇದನ ಪಡೆಯಬಹುದು.

    ಆಕೆ ಒಪ್ಪದಿದ್ದರೆ ಪ್ರತ್ಯೇಕವಾಗಿ ನಿಮ್ಮ ಅಣ್ಣ ವಿಚ್ಛೇದನಕ್ಕೆ ಪ್ರಕರಣ ದಾಖಲಿಸಿ ನ್ಯಾಯಾಲಯದ ಆದೇಶ ಪಡೆದೇ ಇನ್ನೊಂದು ಮದುವೆ ಆಗಬೇಕು. ಹಾಗೇ ಮತ್ತೊಂದು ಮದುವೆ ಅದರೆ ಶಿಕ್ಷೆ ಆಗುತ್ತದೆ.

    (ಅಂಕಣಕಾರರು ಹಿರಿಯ ವಕೀಲೆ ಹಾಗೂ ಮಧ್ಯಸ್ಥಿಕೆದಾರರು)

    ಸೂಚನೆ: ಕಾನೂನಿಗೆ ಸಂಬಂಧಿಸಿದ ನಿಮ್ಮ ಪ್ರಶ್ನೆಗಳನ್ನು [email protected] ಅಥವಾ [email protected] ಗೆ ಕಳುಹಿಸಬಹುದು. (ಕೋರ್ಟ್‌ಗಳಲ್ಲಿ ಇತ್ಯರ್ಥಕ್ಕೆ  ಬಾಕಿ ಇರುವ ಪ್ರಕರಣಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ದಯವಿಟ್ಟು ಕೇಳಬೇಡಿ)

    ಕಾನೂನು ಸಲಹೆ: ಹೆಂಡತಿ ಸಂಸಾರಕ್ಕೆ ಒಪ್ಪದಿದ್ದರೆ ನಾನು ಬೇರೆ ಮದುವೆಯಾಗಬಹುದೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts