More

    ಮಕ್ಕಳು ಕಾನೂನು ತಿಳಿದುಕೊಳ್ಳಲಿ; ವಕೀಲರ ಸಂಘದ ತಾಲೂಕು ಉಪಾಧ್ಯಕ್ಷ ಸಿ.ಎನ್.ಉಪ್ಪಿನ ಸಲಹೆ

    ಹನುಮಸಾಗರ: ಮಕ್ಕಳು ಕಾನೂನಿನ ಬಗ್ಗೆ ಮಾಹಿತಿ ತಿಳಿದುಕೊಳ್ಳಬೇಕು ಎಂದು ವಕೀಲರ ಸಂಘದ ತಾಲೂಕು ಉಪಾಧ್ಯಕ್ಷ ಸಿ.ಎನ್.ಉಪ್ಪಿನ ಹೇಳಿದರು.

    ಮೂಗನೂರು ಗ್ರಾಮದ ಮಾರುತೇಶ್ವರ ದೇವಸ್ಥಾನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮಕ್ಕಳ ಹಕ್ಕುಗಳು ಹಾಗೂ ಮಕ್ಕಳ ಪರವಾದ ಕಾನೂನು ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಾನೂನು ತಿಳಿದುಕೊಳ್ಳುವುದರಿಂದ ಹಕ್ಕುಗಳನ್ನು ಪಡೆದುಕೊಳ್ಳಬಹುದು. ಬಾಲ್ಯವಿವಾಹ ಹಾಗೂ ಬಾಲ ಕಾರ್ಮಿಕ ಸೇರಿದಂತೆ ಮಕ್ಕಳ ಮೇಲೆ ನಡೆಯುವ ಅನೇಕ ದೌರ್ಜ್ಯನಗಳಿಂದ ದೂರವಾಗಬಹುದು. ಎಲ್ಲ ಮಕ್ಕಳು ಕಡ್ಡಾಯವಾಗಿ ಶಿಕ್ಷಣ ಪಡೆದುಕೊಳ್ಳಬೇಕು ಎಂದರು.

    ಗ್ರಾಪಂ ಅಧ್ಯಕ್ಷ ಕಳಕಪ್ಪ ಕಾಡದ, ಉಪಾಧ್ಯಕ್ಷೆ ಪಾರ್ವತಿ ಅಂಗಡಿ, ಪಿಡಿಒ ಪ್ರಶಾಂತ ಹಿರೇಮಠ, ತಾಲೂಕು ಮಕ್ಕಳ ರಕ್ಷಣಾಧಿಕಾರಿ ಮಂಜುಳಾ ಹಕ್ಕಿ, ಕರುನಾಡು ರಕ್ಷಣಾ ಪಡೆ ಜಿಲ್ಲಾಧ್ಯಕ್ಷ ಸುರೇಶ ಹಂಪಣ್ಣವರು, ವೈದ್ಯಾಧಿಕಾರಿ ಪೂರ್ಣಿಮಾ, ವಾಹಿದ್ ಪಾಷಾ, ಶಿಕ್ಷಕರು ಮತ್ತು ಗ್ರಾಮದ ಮುಖಂಡರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts