More

    ಎರಡು ಹನಿಯಿಂದ ಪೋಲಿಯೋ ಮುಕ್ತಿ

    ಕುಕನೂರು: ಪಾಲಕರು ತಮ್ಮ ಐದು ವರ್ಷದೊಳಗಿನ ಮಕ್ಕಳಿಗೆ ತಪ್ಪದೇ ಪಲ್ಸ್ ಪೋಲಿಯೋ ಹನಿ ಹಾಕಿಸಿ ಭವಿಷ್ಯದಲ್ಲಾಗುವ ತೊಂದರೆ ತಪ್ಪಿಸಬೇಕು ಎಂದು ಪ್ರಾಥಮಿಕ ಆರೋಗ್ಯ ಕೇಂದ್ರದ ಸುರಕ್ಷಣಾಧಿಕಾರಿ ಸವಿತಾ ಪಾಟೀಲ್ ಹೇಳಿದರು.

    ತಾಲೂಕಿನ ಭಾನಾಪುರದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಆಯೋಜಿಸಿದ್ದ ಪಲ್ಸ್ ಪೋಲಿಯೋ ಜಾಗೃತಿ ಜಾಥಾಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದರು.

    ಮಾ.3 ರಿಂದ 6ವರಗೆ ರಾಷ್ಟ್ರೀಯ ಪಲ್ಸ್ ಪೋಲಿಯೊ ಕಾರ್ಯಕ್ರಮ ನಡೆಯಲಿದ್ದು, ಎರಡು ಹನಿಗಳು ಪೋಲಿಯೊ ಮುಕ್ತಿಗೆ ರಾಮಬಾಣವಾಗಿವೆ. ಹೀಗಾಗಿ ಮಕ್ಕಳಿಗೆ ತಪ್ಪದೇ ಲಸಿಕೆ ಹಾಕಿಸಿ. ಮೊದಲ ದಿನ ಅಂಗನವಾಡಿ, ಶಾಲಾ ಹಂತದಲ್ಲಿ ಲಸಿಕೆ ಹಾಕಲಾಗುತ್ತದೆ ಎಂದು ತಿಳಿಸಿದರು.

    ಮುಖ್ಯ ಶಿಕ್ಷಕ ಬಸಪ್ಪ ಗಡ್ಡದ, ಪ್ರೌಢ ಶಾಲೆಯ ದೈಹಿಕ ಶಿಕ್ಷಕ ಸಂಗಪ್ಪ ಗಾಣಿಗೇರ, ಸಮುದಾಯ ಆರೋಗ್ಯ ಅಧಿಕಾರಿ ಪ್ರತಿಭಾ ತೋಟದ, ಆಶಾ ಕಾರ್ಯಕರ್ತೆಯರಾದ ಶ್ರೀದೇವಿ ಗಡಾದ, ಗೀತಾ ಯಡಿಯಾಪುರ, ಶಿಕ್ಷಕಿ ಕಲ್ಪನಾ ಹಳ್ಳೂರು, ಕವಿತಾ ಬಡಿಗೇರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts