More

    ಮಗುವಿನ ಬೆಳವಣಿಗೆಯಲ್ಲಿ ಪಾಲಕರ ಪಾತ್ರ ದೊಡ್ಡದು

    ಕೆ.ಎಂ.ದೊಡ್ಡಿ: ಮಗುವಿನ ಬೆಳವಣಿಗೆಗೆ ಪಾಲಕರು ಐದು ಪಂಚಕೋಶ ಅಂಶಗಳನ್ನು ಅಳವಡಿಸಿಕೊಳ್ಳಬೇಕೆಂದು ಶೈಕ್ಷಣಿಕ ಸಲಹೆಗಾರ್ತಿ ಮತು ಶಿಕ್ಷಣ ತಜ್ಞೆ ಡಾ.ಎಲ್. ಸವಿತಾ ಲಕ್ಷ್ಮಣ್ ಸಲಹೆ ನೀಡಿದರು.

    ಇಲ್ಲಿನ ಕುವೆಂಪು ಸಭಾಂಗಣದಲ್ಲಿ ಭಾರತಿ ಸ್ಕೂಲ್ ಆಫ್ ಎಕ್ಸ್‌ಲೆನ್ಸ್ ವತಿಯಿಂದ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಮಗುವಿನ ಅರಿವು ಮತ್ತು ಭಾಷೆ, ಶಾರೀರಿಕ ಬೆಳವಣಿಗೆ, ಬೌದ್ಧಿಕ ಬೆಳವಣಿಗೆ, ಸಾಮಾಜಿಕ ಅಭಿವೃದ್ಧಿ ತತ್ವಗಳನ್ನು ಅಳವಡಿಸಿಕೊಂಡು ಮಗುವಿನಲ್ಲಿ ಪ್ರಶ್ನಾರ್ಥಕ ಮನೋಭಾವವನ್ನು ಬೆಳೆಸಬೇಕು ಎಂದು ಕಿವಿಮಾತು ಹೇಳಿದರು.

    ಮಗುವಿನ ಸರ್ವತೋಮುಖ ಬೆಳವಣಿಗೆಯಲ್ಲಿ ಪಾಲಕರು, ಶಿಕ್ಷಕರ ಪಾತ್ರ ಮಹತ್ವವಾದದ್ದು. ಶೈಕ್ಷಣಿಕ ಪ್ರಗತಿಗೆ ಶಿಕ್ಷಕರೊಂದಿಗೆ ಪಾಲಕರೂ ಸಹಕರಿಸಬೇಕು. ಸಾಮಾಜಿಕ ಬದಲಾವಣೆಯಲ್ಲಿ ಮಕ್ಕಳು ಅಂತರ್ಮುಖಿಗಳಾಗಿದ್ದಾರೆ. ಅವರಲ್ಲಿ ಹೊಂದಾಣಿಕೆ ಮನೋಭಾವನೆಗೆ ಬಗ್ಗೆ ತಿಳಿಸಬೇಕು ಎಂದರು.

    ಭಾರತಿ ಸ್ಕೂಲ್ ಅಕಾಡೆಮಿ ಆಫ್ ಪಿಯು ಕಾಲೇಜು ಪ್ರಾಂಶುಪಾಲರಾದ ಸಿ.ವಿ ಮಲ್ಲಿಕಾರ್ಜುನ, ಮುಖ್ಯ ಶಿಕ್ಷಕಕಿ ಎಚ್.ಪಿ.ಪ್ರತಿಮಾ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts