ಕೋವಿಡ್​ ರೋಗಿಯ ಜತೆ ಸೆಕ್ಸ್​ ಮಾಡಿ ಸಿಕ್ಕಿಬಿದ್ದ ನರ್ಸ್​: ಪ್ರಕರಣದಲ್ಲಿದೆ ಊಹೆಗೂ ಮೀರಿದ ಸ್ಫೋಟಕ ಟ್ವಿಸ್ಟ್​!

Nurse
Published on

ಜಕಾರ್ತ: ಪಿಪಿಇ ಕಿಟ್​ ಬಿಚ್ಚಿಟ್ಟು ಕರೊನಾ ವೈರಸ್​ ರೋಗಿಯ ಜತೆ ಸೆಕ್ಸ್​ ಮಾಡಿದ್ದನ್ನು ಒಪ್ಪಿಕೊಂಡ ಇಂಡೋನೇಷ್ಯಾ ಮೂಲದ ನರ್ಸ್ ಅಮಾನತು ಶಿಕ್ಷೆಗೆ ಗುರಿಯಾ​ಗಿರುವುದಾಗಿ ವರದಿಯಾಗಿದೆ.

ಈ ವರದಿಯಲ್ಲಿರುವ ಸ್ಫೋಟಕ ಟ್ವಿಸ್ಟ್​ ಏನೆಂದರೆ, ನರ್ಸ್​ ಮತ್ತು ಕರೊನಾ ರೋಗಿ ಇಬ್ಬರು ಪುರುಷರಾಗಿದ್ದು, ಆಸ್ಪತ್ರೆಯ ಟಾಯ್ಲೆಟ್​ ರೂಮ್​ನಲ್ಲಿ ಭೇಟಿಯಾಗುತ್ತಿದ್ದುರ ಬಗ್ಗೆ ಸ್ವತಃ ರೋಗಿಯೇ ತನ್ನ ಜಾಲತಾಣದಲ್ಲಿ ಬರೆದುಕೊಂಡ ಬಳಿಕ ಘಟನೆ ಬೆಳಕಿಗೆ ಬಂದಿದೆ. ನರ್ಸ್​ ಜತೆ ನಡೆಸಿದ ಅಶ್ಲೀಲ ಸಂಭಾಷಣೆಯ ವಾಟ್ಸ್​ಆ್ಯಪ್​ ಸ್ಕ್ರೀನ್​ ಶಾಟ್​ ಅನ್ನು ಜಾಲತಾಣದಲ್ಲಿಯೂ ಅಪ್​ಲೋಡ್​ ಮಾಡಿಕೊಂಡಿದ್ದಾನೆ.

ಇಷ್ಟೇ ಅಲ್ಲದೆ, ಪುರುಷ ನರ್ಸ್​ ಪಿಪಿಇ ಕಿಟ್​ ಆಸ್ಪತ್ರೆಯ ನೆಲದ ಮೇಲೆ ಬಿದ್ದಿರುವ ಫೋಟೋವನ್ನು ಸಹ ಕರೊನಾ ರೋಗಿ ಪೋಸ್ಟ್​ ಮಾಡಿಕೊಂಡಿದ್ದಾನೆ. ಇಬ್ಬರು ಸಲಿಂಗಿಕಾಮಿಗಳನ್ನು ಗುರುತಿಸಲಾಗಿದ್ದು, ತಾವು ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ.

ನರ್ಸ್​ಗೆ ಕರೊನಾ ಪರೀಕ್ಷೆಯನ್ನು ಮಾಡಿಸಲಾಗಿದ್ದು, ನೆಗಿಟಿವ್​ ವರದಿ ಬಂದಿದ್ದರಿಂದ ಆತನನ್ನು ವಿಚಾರಣೆಗಾಗಿ ಪೊಲೀಸ್ ವಶಕ್ಕೆ ಒಪ್ಪಿಸಲಾಗಿದೆ. ಕರೊನಾ ರೋಗಿಗೆ ಈಗಲೂ ಪಾಸಿಟಿವ್​ ಇರುವುದರಿಂದ ಆತನನ್ನು ಪ್ರತ್ಯೇಕವಾಗಿ ಇಡಲಾಗಿದೆ.

ಪ್ರಕರಣವನ್ನು ಕೇಂದ್ರ ಜಕಾರ್ತ ಪೊಲೀಸರಿಗೆ ವರ್ಗಾಯಿಸಲಾಗಿದೆ. ಒಂದು ವೇಳೆ ಅಪರಾಧ ಸಾಬೀತಾದಲ್ಲಿ ಇಂಡೋನೇಷ್ಯಾ ಪೋರ್ನೋಗ್ರಫಿ ಕಾನೂನಿನ ಅಡಿಯಲ್ಲಿ ನರ್ಸ್​ 10 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ಇನ್ನು ಈ ಘಟನೆ ವಿಸ್ಮ ಅಟ್ಲೆಟ್​ ಎಮರ್ಜೆನ್ಸಿ ಆಸ್ಪತ್ರೆಯಲ್ಲಿ ನಡೆದಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net