ರಜೆ ಪಡೆಯದೆ ಸೇವೆ ಸಲ್ಲಿಸುತ್ತಿರುವ ಗರ್ಭಿಣಿ ನರ್ಸ್​ಗೆ ಕರೆ ಮಾಡಿ ಅಭಿನಂದಿಸಿದ ಸಿಎಂ

Yediyurappa 21 Dec 19
Published on

ಶಿವಮೊಗ್ಗ: ತುಂಬು ಗರ್ಭಿಣಿ ಅವಧಿಯಲ್ಲೂ ರಜೆ ಪಡೆಯದೆ ಸೇವೆ ಸಲ್ಲಿಸುತ್ತಿರುವ ನರ್ಸ್ ರೂಪ​ ಅವರನ್ನು ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಅವರು ಫೋನ್​ ಕರೆ ಮಾಡಿ ಅಭಿನಂದಿಸಿದ್ದಾರೆ.

ಅಲ್ಲದೆ ಇಂದಿನಿಂದ ರಜೆ ಪಡೆದು ವಿಶ್ರಾಂತಿಗೆ ತೆರಳುವಂತೆ ಕೂಡ ಸೂಚಿಸಿದ್ದಾರೆ.

ತೀರ್ಥಹಳ್ಳಿಯ ಶ್ರೀಜಯಚಾಮರಾಜೇಂದ್ರ ಸರ್ಕಾರಿ ಆಸ್ಪತ್ರೆಯಲ್ಲಿ ರೂಪ ಗುತ್ತಿಗೆ ಆಧಾರದಲ್ಲಿ ನರ್ಸ್​ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಕರೊನಾ ವೈರಸ್​ ಹಾವಳಿ ಹಿನ್ನೆಲೆಯಲ್ಲಿ ಅವರು ಗರ್ಭಿಣಿಯಾಗಿದ್ದರೂ ರಜೆ ಪಡೆಯದೆ ಸೇವೆ ಸಲ್ಲಿಸುತ್ತಿದ್ದಾರೆ. ನಿತ್ಯ ಗಾಜನೂರು ಗ್ರಾಮದಿಂದ 60 ಕಿ.ಮೀ. ಇರುವ ತೀರ್ಥಹಳ್ಳಿಗೆ ಬಸ್​ನಲ್ಲಿ ಬಂದು ಸೇವೆ ಸಲ್ಲಿಸುತ್ತಿದ್ದಾರೆ.

ರೂಪ ಅವರ ಈ ಸೇವೆಯನ್ನು ಗಮನಿಸಿದ ಸಿಎಂ ಯಡಿಯೂರಪ್ಪ ಅವರು ಖುದ್ದು ಕರೆ ಮಾಡಿ ಇಂದಿನಿಂದ ರಜೆಯುವಂತೆ ಸೂಚಿಸಿದರು. ಗುತ್ತಿಗೆ ಆಧಾರದ ಮೇಲೆ ದುಡಿಯುತ್ತಿದ್ದರೂ ಎಲ್ಲ ರೀತಿಯ ಸೌಲಭ್ಯ ಒದಗಿಸುವುದಾಗಿ ಅವರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net