More

    ಭಾರತ-ಚೀನಾ ಗಡಿಯಲ್ಲಿ ಸೈನಿಕರ ಹೊಡೆದಾಟ…ಕಲ್ಲು ತೂರಾಟ

    ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಭಾರತ-ಪಾಕಿಸ್ತಾನ ಗಡಿ ನಿಯಂತ್ರಣಾ ರೇಖೆ ಬಳಿ ಎರಡೂ ದೇಶಗಳ ಯೋಧರ ನಡುವೆ ಸತತವಾಗಿ ಕದಾಟ ನಡೆಯುತ್ತಲೇ ಇದೆ. ಈ ಮಧ್ಯೆ ಉತ್ತರ ಸಿಕ್ಕಿಂನಲ್ಲಿರುವ ಭಾರತ-ಚೀನಾದ ವಾಸ್ತವ ಗಡಿ ರೇಖೆ (ಲೈನ್​ ಆಫ್​ ಆ್ಯಕ್ಚುವಲ್​ ಕಂಟ್ರೋಲ್​) ಬಳಿಯೂ ಎರಡೂ ದೇಶಗಳ ಸೈನಿಕರ ನಡುವೆ ಹೊಡೆದಾಟ ನಡೆದಿದೆ.

    ಉತ್ತರ ಸಿಕ್ಕಿಂನ ಸಮುದ್ರಮಟ್ಟದಿಂದ 5000 ಮೀಟರ್​ ಎತ್ತರದಲ್ಲಿರುವ ನಾಕು ಲಾ ವಲಯದ ಬಳಿ ಈ ಸಂಘರ್ಷ ನಡೆದಿದೆ. ಇಲ್ಲಿ ಗುಂಡಿನ ಚಕಮಕಿ ನಡೆದಿಲ್ಲ. ಬದಲಿಗೆ ಸೈನಿಕರು ಪರಸ್ಪರ ಕಲ್ಲು ತೂರಿಕೊಂಡಿದ್ದಾರೆ. ಕೈಯಲ್ಲೇ ಹೊಡೆದಾಡಿಕೊಂಡಿದ್ದಾರೆ.

    ಇದನ್ನೂ ಓದಿ: ಬೇಕರಿ ಮಾಲೀಕನ ಬಂಧನ..ಕಾರಣ ಅಂಗಡಿಯೆದುರು ಹಾಕಿದ್ದ ಒಂದು ಜಾಹೀರಾತು…!

    ಎರಡೂ ದೇಶಗಳ ಒಟ್ಟು 150 ಸೈನಿಕರು ಸ್ಥಳದಲ್ಲಿ ಸೇರಿ, ಹೊಡೆದಾಡಿಕೊಂಡಿದ್ದಾರೆ. ಅದರಲ್ಲಿ ನಾಲ್ವರು ಭಾರತೀಯ ಯೋಧರು, ಏಳು ಮಂದಿ ಚೀನಾ ಸೈನಿಕರು ಗಾಯಗೊಂಡಿದ್ದಾರೆ. ನಂತರ ಕಮಾಂಡೋಗಳು ಆಗಮಿಸಿ ಗಲಾಟೆಯನ್ನು ನಿಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಎರಡೂ ದೇಶಗಳು ಪ್ರತಿದಿನದಂತೆ ಸಹಜವಾಗಿ ಗಸ್ತು ತಿರುಗುತ್ತಿದ್ದವು. ಈ ವೇಳೆ ಭಾರತೀಯ ಗಸ್ತು ಪಡೆಗೆ ಚೀನಾದ ಸೈನಿಕರು ತಡೆ ಉಂಟು ಮಾಡಿದರು. ಆಗ ಮಾತಿನ ಚಕಮಕಿ ಶುರುವಾಗಿ ಅದರು ಪರಸ್ಪರ ಹೊಡೆದಾಟಕ್ಕೆ ತಿರುಗಿತು. ಪರಸ್ಪರ ಕಲ್ಲು ತೂರಾಟವೂ ನಡೆಯಿತು.

    ಇದನ್ನೂ ಓದಿ: ಸಿಮ್ ನಿಷ್ಕ್ರಿಯಗೊಳಿಸಿ ಕನ್ನ!:  ಡೂಪ್ಲಿಕೇಟ್ ಸಿಮ್​ನಿಂದ ಕೃತ್ಯ

    ಭಾರತ ಮತ್ತು ಪಾಕಿಸ್ತಾನ ಸೈನಿಕರ ನಡುವೆ ಗುಂಡಿನ ಚಕಮಕಿ ತೀರ ಸಾಮಾನ್ಯವಾಗಿಬಿಟ್ಟಿದೆ. ಆದರೆ ಭಾರತ-ಚೀನಾ ಸೈನಿಕರು ಹೀಗೆ ಹೊಡೆದಾಟಕ್ಕೆ ಇಳಿದಿದ್ದು ಇತ್ತೀಚಿನ ಹಲವು ವರ್ಷಗಳಿಂದ ವರದಿಯಾಗಿರಲಿಲ್ಲ. 2007ರಲ್ಲಿ ಒಮ್ಮೆ ಈ ಎರಡೂ ದೇಶಗಳ ಸೈನಿಕರು ಕಲ್ಲು ತೂರಾಟ ಮಾಡಿಕೊಂಡಿದ್ದರು. ಅದಾದ ಬಳಿಕ ವಾಸ್ತವ ಗಡಿ ರೇಖೆ ಬಳಿ ಯಾವುದೇ ಗಲಭೆ, ಹೊಡೆದಾಟ ನಡೆದಿರಲಿಲ್ಲ. ಸದ್ಯಕ್ಕೆ ಎರಡೂ ದೇಶಗಳ ಶಿಷ್ಟಾಚಾರವನ್ನು ಮುಂದಿಟ್ಟುಕೊಂಡು ರಾಜಿ ಮಾಡಿಸಲಾಗಿದೆ. ಗಾಯಗೊಂಡವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ. (ಏಜೆನ್ಸೀಸ್​)

    ಲಂಡನ್​​ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಹುಬ್ಬಳ್ಳಿಯ ಟೆಕ್ಕಿ; 50ದಿನಗಳ ಬಳಿಕ ಊರಿಗೆ ಬರುತ್ತಿದೆ ಮೃತದೇಹ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts