

ಬೆಂಗಳೂರು: ರಾಜ್ಯದಲ್ಲಿ ಕರೊನಾ ಅಟ್ಟಹಾಸ ರಾಜ್ಯದಲ್ಲಿ ಹಿಂದೆಂದಿಗಿಂತಲೂ ಹೆಚ್ಚಾಗಿಯೇ ಮುಂದುವರೆದಿದೆ. ನಿನ್ನೆ ಸಂಜೆ 5 ಗಂಟೆಯಿಂದ ಇಲ್ಲಿಯವರೆಗೆ 53 ಹೊಸ ಸೋಂಕಿತರನ್ನು ಪತ್ತೆ ಹಚ್ಚಲಾಗಿದೆ. ಇವರ ಪೈಕಿ ಹೆಚ್ಚಿನವರು ಪರ ಊರುಗಳಿಂದ ರಾಜ್ಯಕ್ಕೆ ವಾಪಸಾದವರು.
ವೈರಸ್ನ ಸುಳಿವೇ ಇಲ್ಲದೆ ಹಸಿರು ವಲಯ (ಗ್ರೀನ್ ಝೋನ್) ಎಂದು ಕರೆಸಿಕೊಂಡು ತಣ್ಣಗಿದ್ದ ಶಿವಮೊಗ್ಗ ಜಿಲ್ಲೆಯಲ್ಲಿ 9 ಪ್ರಕರಣಗಳು ಪತ್ತೆಯಾಗಿವೆ. ಜಿಲ್ಲೆಯ ಶಿಕಾರಿಪುರದಲ್ಲಿ ಎಂಟು ಹಾಗೂ ತೀರ್ಥಹಳ್ಳಿಯಲ್ಲಿ ಒಂದು ಪ್ರಕರಣಗಳು ಬೆಳಕಿವೆ ಬಂದಿವೆ. ಈ 9 ಮಂದಿ ಗುಜರಾತ್ನ ಅಮಹದಾಬಾದ್ಗೆ ಪ್ರಯಾಣ ಬೆಳೆಸಿ ಬಂದವರಾಗಿದ್ದಾರೆ.
ಅದೇ ರೀತಿ, ರಾಜಸ್ಥಾನದ ಅಜಮೀರ್ನಿಂದ ಪ್ರಯಾಣ ಬೆಳೆಸಿ ಬಂದ ಬೆಳಗಾವಿ 21ಮಂದಿ, ಬಾಗಲಕೋಟೆಯ 7 ಹಾಗೂ ದಾವಣಗೆರೆ ಓರ್ವನಿಗೆ ಕರೊನಾ ಸೋಂಕು ತಗುಲಿದೆ. ಮಹಾರಾಷ್ಟ್ರದಿಂದ ಬಂದ ಕಲಬುರಗಿಯ ಓರ್ವನಲ್ಲಿ ಸೋಂಕು ಪತ್ತೆಯಾಗಿದೆ.
ಸೋಂಕಿತನೊಬ್ಬನ ಸಂಪರ್ಕಕ್ಕೆ ಬಂದಿರುವ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ 7 ಮಂದಿಗೂ ಸೋಂಕು ತಗುಲಿದೆ. ಬೆಂಗಳೂರು ನಗರ 3, ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯಲ್ಲಿ 1, ಕಲಬುರಗಿಯಲ್ಲಿ 1, ಕಲಬುರಗಿ ಜಿಲ್ಲೆಯ ಅಫಜಲಪುರದಲ್ಲಿ 1 ಹಾಗೂ ದಾವಣಗೆರೆ 1 ಹೊಸ ಪ್ರಕರಣಗಳನ್ನು ಪತ್ತೆಹಚ್ಚಲಾಗಿದೆ.
ಬೆಳಗಾವಿಯಲ್ಲಿ ಕಂಡುಬಂದಿರುವ ಹೊಸ ಸೋಂಕಿತರ ಪೈಕಿ ಹೆಚ್ಚಿನವರು 3ರಿಂದ 12 ವರ್ಷ ಒಳಗಿನವರು.
ಈ ಮೂಲಕ ರಾಜ್ಯದಲ್ಲಿ ಕರೊನಾ ಸೋಂಕಿತರ ಸಂಖ್ಯೆ 847ಕ್ಕೆ ಏರಿದ್ದು, 405 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. 31 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.