ನೀರಿಲ್ಲದ ಕಾರಣಕ್ಕೆ ಬಂದ್​ ಆಯ್ತು ಅಣುಶಕ್ತಿ ವಿದ್ಯುತ್​ ಸ್ಥಾವರ....!

nuclear power plant
Published on

ಪ್ಯಾರಿಸ್​: ಉತ್ತರ ಫ್ರಾನ್ಸ್​ನಲ್ಲಿ ಕಾರ್ಯಾಚರಿಸುತ್ತಿದ್ದ ಅಣುಶಕ್ತಿ ಚಾಲಿತ ವಿದ್ಯುತ್​ ಸ್ಥಾವರ ನೀರಿಲ್ಲದ ಕಾರಣಕ್ಕಾಗಿ ತಾತ್ಕಾಲಿಕವಾಗಿ ಬಂದ್​ ಮಾಡಲಾಗಿದೆ.

ಬೆಲ್ಜಿಯಂ ಗಡಿಯ ಆರ್ಡೆನ್ನೆಸ್​ನಲ್ಲಿರುವ ಚೂಝ್​​ ನ್ಯೂಕ್ಲಿಯರ್​ ಪವರ್​ ಪ್ಲಾಂಟ್​ನ ಎರಡನೇ ರಿಯಾಕ್ಟರ್​ಅನ್ನು ಸೋಮವಾರ ಮಧ್ಯರಾತ್ರಿ ಬಂದ್​ ಮಾಡಲಾಗಿದೆ. ಜತೆಗೆ, ಶುಕ್ರವಾರ ಸಂಜೆಯಷ್ಟೇ ಮೊದಲ ರಿಯಾಕ್ಟರ್​ಅನ್ನು ಸ್ಥಗಿತಗೊಳಿಸಲಾಗಿತ್ತು ಎಂದು ಕಂಪನಿ ಮಾಹಿತಿ ನೀಡಿದೆ.

ಅಣುಸ್ಥಾವರಕ್ಕೆ ನೀರು ಪೂರೈಸುವ ಮ್ಯೂಸ್​ ನದಿ ಪಾತ್ರದಲ್ಲಿ ನೀರಿನ ಮಟ್ಟ ಭಾರಿ ಇಳಿಕೆಯಾಗಿದೆ. ನದಿಯ ಕವಲೊಂದರ ಮೂಲಕ ಹರಿಯುವ ನೀರನ್ನು ಅಣುಸ್ಥಾವರವನ್ನು ತಣ್ಣಗಾಗಿಸಲು ಬಳಸಲಾಗುತ್ತದೆ.

ಆರ್ಡೆನ್ನೆಸ್​ ಪ್ರದೇಶದಲ್ಲಿ ಚೂಝ್​ ಜನಸಮುದಾಯದ ಸ್ಮರಣೆಗಾಗಿ ಈ ಅಣುಸ್ಥಾವರಕ್ಕೆ ಚೂಝ್​​ ಎಂದು ಹೆಸರಿಡಲಾಗಿದೆ. ಸದ್ಯ ಈ ಪ್ರದೇಶದಲ್ಲಿ ಕ್ಷಾಮ ಆವರಿಸಿದೆ. ಹೀಗಾಗಿ ವಿದ್ಯುತ್​ ಸ್ಥಾವರಗಳನ್ನು ಬಂದ್​ ಮಾಡಲಾಗಿದೆ ಎಂದು ಫ್ರೆಂಚ್ ಇಂಧನ ಕಂಪನಿ ಎಡಿಎಫ್​ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net