ಎನ್​ಟಿಎ ವಿವಿಧ ಪರೀಕ್ಷೆಗಳ ದಿನಾಂಕ ಪ್ರಕಟಣೆ

Exam
Published on

ನವದೆಹಲಿ: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ವಿವಿಧ ಪರೀಕ್ಷೆಗಳ ದಿನಾಂಕ ಪಟ್ಟಿಯನ್ನು ವೆಬ್​ಸೈಟ್​ನಲ್ಲಿ ಬಿಡುಗಡೆಯಾಗಿದೆ.

ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಪರೀಕ್ಷಾ ಕ್ಯಾಲೆಂಡರ್ ನೋಡಬಹುದು.

ಜೆಇಇ ಮುಖ್ಯ ಪರೀಕ್ಷೆ ಮತ್ತು ನೀಟ್ 2020 ರ ಪರೀಕ್ಷಾ ದಿನಾಂಕಗಳನ್ನು ಏಜೆನ್ಸಿಯು ಜುಲೈ ನಲ್ಲೇ ಬಿಡುಗಡೆ ಮಾಡಿತ್ತು.

ಯುಜಿಸಿ ನೆಟ್, ದೆಹಲಿ ವಿವಿ ಪ್ರವೇಶ ಪರೀಕ್ಷೆ (ಡಿಯುಇಟಿ), ಐಸಿಎಆರ್ ಎಐಇಇಎ, ಇಗ್ನೋ ಓಪನ್ ಎಂಎಟಿ, ಅಖಿಲ ಭಾರತ ಆಯುಷ್ ಸ್ನಾತಕೊತ್ತರ ಪದವಿ ಪ್ರವೇಶ ಪರೀಕ್ಷೆ, ಇಗ್ನೋ ಪಿಎಚ್​ಡಿ ಪ್ರವೇಶ ಪರೀಕ್ಷೆ, ಐಸಿಎಆರ್ ಪಿಎಚ್​ಡಿ, ಸ್ನಾತಕೋತ್ತರ ಪದವಿ, ಜೆಆರ್​ಎಫ್/ ಎಸ್​ಆರ್​ಎಫ್ ಪರೀಕ್ಷಾ ದಿನಾಂಕಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳು ಅಧಿಕೃತ ವೆಬ್‌ಸೈಟ್‌ nta.ac.in ನಲ್ಲಿ ಪರೀಕ್ಷೆಯ ವೇಳಾಪಟ್ಟಿಯನ್ನು ಪರಿಶೀಲಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net