ಜನರು ಸೇವಾ ಕಾರ್ಯಗಳ ಪ್ರಯೋಜನ ಪಡೆಯಲಿ

nrp lions club
ಎನ್.ಆರ್.ಪುರದ ಲಯನ್ಸ್ ಕ್ಲಬ್ ಪದಾಧಿಕಾರಿಗಳ ಪದವಿ ಸ್ವೀಕಾರ ಸಮಾರಂಭದಲ್ಲಿ ನೂತನ ಅಧ್ಯಕ್ಷ ರವಿಕುಮಾರ್ ಅವರಿಗೆ ಎಚ್.ಎಂ.ತಾರಾನಾಥ್ ಅಧಿಕಾರ ಹಸ್ತಾಂತರಿಸಿದರು. ಎಂ.ಬಿ.ಗೋಪಾಲ್‌ಗೌಡ, ರವಿಚಂದ್ರ ಇತರರಿದ್ದರು.
Published on

ಎನ್.ಆರ್.ಪುರ: ಇಲ್ಲಿನ ಲಯನ್ಸ್ ಕ್ಲಬ್ ಸ್ವಂತ ಕಟ್ಟಡ ಕಟ್ಟಲು ಪ್ರಾರಂಭಿಸಿರುವುದು ಸಂತಸದ ವಿಷಯ ಎಂದು ಲಯನ್ಸ್ ಕ್ಲಬ್‌ನ ಜಿಲ್ಲಾ 317-ಡಿ ನ ದ್ವಿತೀಯ ಅಸಿಸ್ಟೆಂಟ್ ಗೌರ್ನರ್ ಎಚ್.ಎಂ.ತಾರಾನಾಥ್ ತಿಳಿಸಿದರು.
ಸೋಮವಾರ ಸಿಂಸೆಯಲ್ಲಿ ಏರ್ಪಡಿಸಿದ್ದ ಲಯನ್ಸ್ ಕ್ಲಬ್‌ನ 2024-25ನೇ ಸಾಲಿನ ನೂತನ ಪದಾಧಿಕಾರಿಗಳ ಪದವಿ ಸ್ವೀಕಾರ ಸಮಾರಂಭದಲ್ಲಿ ಮಾತನಾಡಿ, ಲಯನ್ಸ್ ಕ್ಲಬ್ ಬಡವರಿಗೆ ಅನುಕೂಲವಾಗುವ ಸಮಾಜಮುಖಿ ಕಾರ್ಯಕ್ರಮಗಳನ್ನು ರೂಪಿಸಬೇಕು. ಈ ಭಾಗದ ಜನರು ಲಯನ್ಸ್ ಕ್ಲಬ್ ರೂಪಿಸಿದ ಕಾರ್ಯಕ್ರಮಗಳ ಪ್ರಯೋಜನ ಪಡೆಯಬೇಕು ಎಂದರು.
ದಾನಿಗಳಾದ ಡಿ.ರಮೇಶ್ ಅವರು ಕೊಪ್ಪ ತಾಲೂಕಿನ ಹಿರೇಕೊಡಿಗೆ ಲಾಲ್ ಬಹಾದೂರ್ ಪ್ರೌಢಶಾಲೆಗೆ ನೀಡಿದ ಶಾಲಾ ಪರಿಕರಗಳನ್ನು ವಿತರಿಸಲಾಯಿತು.
ಲಯನ್ಸ್ ಕ್ಲಬ್ ಪ್ರಾಂತೀಯ ಅಧ್ಯಕ್ಷ ಎಂ.ಬಿ.ಗೋಪಾಲ್ ಗೌಡ, ನಿರ್ಗಮಿತ ಅಧ್ಯಕ್ಷ ರವಿಚಂದ್ರ, ವಲಯ 3ರ ಅಧ್ಯಕ್ಷ ಕೆ.ಆರ್.ಗೋಪಾಲಗೌಡ, ಬಾಳೆಹೊನ್ನೂರು ಲಯನ್ಸ್ ಕ್ಲಬ್ ಅಧ್ಯಕ್ಷ ಶ್ರೀನಿವಾಸ್, ಶೃಂಗೇರಿ ಲಯನ್ಸ್ ಕ್ಲಬ್ ಅಧ್ಯಕ್ಷ ಧರ್ಮಪ್ಪ ಹೆಗ್ಡೆ, ಎನ್.ಎರ್.ಪುರ ಲಯನ್ಸ್ ಕ್ಲಬ್ ನೂತನ ಕಾರ್ಯದರ್ಶಿ ಕೆ.ಟಿ.ಎಲ್ದೋ, ಖಜಾಂಚಿ ಈಶ್ವರಾಚಾರ್, ಲಯನ್ಸ್ ಕ್ಲಬ್ ವಲಯ 2ರ ಅಧ್ಯಕ್ಷ ಸಂದೇಶ ಹೆಗ್ಡೆ, ಪುಷ್ಪಾ ರವಿಕುಮಾರ್, ದಕ್ಷಿಣಾಮೂರ್ತಿ, ಸಿಜು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net