INDIA bloc internal rift : ತಮಿಳುನಾಡಿನಲ್ಲಿ ಡಿಎಂಕೆ ಜೊತೆಗಿನ ಸಂಬಂಧವನ್ನು ಈಗಾಗಲೇ ಕಾಂಗ್ರೆಸ್ ಕಡೆದುಕೊಂಡು, ಟಿವಿಕಗೆ ಬೆಂಬಲ ಸೂಚಿಸಿದೆ. ಈ ವಿದ್ಯಮಾನದಿಂದಾಗಿ ಮೈತ್ರಿಕೂಟದ ಪ್ರಮುಖ ಮಿತ್ರಪಕ್ಷಗಳ ನಡುವೆ ಈಗ ಅಸಮಾಧಾನದ ಭುಗಿಲೆದ್ದಿದೆ. ಈ ಮಧ್ಯೆ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್(Akhilesh Yadav ) ಅವರು ಕಾಂಗ್ರೆಸ್ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿರುವುದು ರಾಜಕೀಯ ಚರ್ಚೆಗೆ ಗ್ರಾಸವಾಗಿದೆ.