ಗರ್ಲ್​ಫ್ರೆಂಡ್ಸ್​ ಹೊಂದಿರುವ IPL ಆಟಗಾರಿಗೆ ಶಾಕ್; BCCI ನಿಂದ ಹೊಸ ರೂಲ್ಸ್ ಜಾರಿ, ಕಾರಣ ಏನು?

IPL Player Girlfriend Team Info Leak
IPL Player Girlfriend Team Info Leak
Published on

ಪ್ರಮುಖ ಮುಖ್ಯಾಂಶಗಳು

  • ಐಪಿಎಲ್ ಆಟಗಾರರ ಗೆಳತಿಯರಿಂದ ತಂಡದ ಗೌಪ್ಯ ಮಾಹಿತಿ ಬಯಲಾಗುತ್ತಿರುವ ಆರೋಪ
  • ಘಟನೆ ಸಂಬಂಧ ಬಿಸಿಸಿಐಗೆ ದೂರು ನೀಡಿದ ಫ್ರಾಂಚೈಸಿ ಮಾಲೀಕರು.
  • ಆಟಗಾರರ ಹೋಟೆಲ್ ಕೊಠಡಿಗಳಿಗೆ ಅನಧಿಕೃತ ವ್ಯಕ್ತಿಗಳ ಪ್ರವೇಶಕ್ಕೆ ನಿಷೇಧ
​​ಮುಂಬೈ: 2026ರ ಐಪಿಎಲ್   ಕಣದಲ್ಲಿ  ಕ್ರೀಡಾಪಟುಗಳಿಗಿಂತ ಆಟಗಾರರ ವೈಯಕ್ತಿಕ ಜೀವನ ಮತ್ತು 'ಗರ್ಲ್‌ಫ್ರೆಂಡ್ ಸಂಸ್ಕೃತಿ' ಆಗಾಗ್ಗೆ ಸುದ್ದಿಯಾಗುತ್ತಿದೆ. ಅನುಷ್ಕಾ ಶರ್ಮಾ, ಹಾರ್ದಿಕ್​ ಪಾಂಡ್ಯರ ಹುಡುಗಿ ಹೀಗೆ ಅವರು ಧರಿಸಿದ್ದ ಬಟ್ಟೆ-ಬರೆ ಬಗ್ಗೆ ಚರ್ಚೆ ಮಾಡಲಾಗುತ್ತದೆ. ಆದರೆ, ಈ ಪ್ರವೃತ್ತಿಯು ಈಗ ಬೇರೆ ರೀತಿಯ ವಿವಾದಕ್ಕೆ ಕಾರಣವಾಗಿದೆ. ಅದೇನು ಎಂದರೆ, ಸ್ಟಾರ್ ಆಟಗಾರರಾದ ಹಾರ್ದಿಕ್ ಪಾಂಡ್ಯ ಮತ್ತು ಅರ್ಶ್‌ದೀಪ್ ಸಿಂಗ್ ಅವರ ಗೆಳತಿಯರು ತಂಡದ ಆಂತರಿಕ ಮಾಹಿತಿಯನ್ನು ಹೊರಗಿನವರಿಗೆ ಸೋರಿಕೆ ಮಾಡುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ಬಿಸಿಸಿಐ ಈಗ ಕಠಿಣ ಕ್ರಮಕ್ಕೆ ಮುಂದಾಗಿದೆ.

 ಹಾರ್ದಿಕ್, ಅರ್ಶ್‌ದೀಪ್ ಗರ್ಲ್​ಫ್ರೆಂಡ್ಸ್​ ಇದಕ್ಕೆ ಕಾರಣನಾ?

ಮಾಧ್ಯಮಗಳ ವರದಿ ಪ್ರಕಾರ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯರ ಗೆಳತಿ ಮಹಿಕಾ ಶರ್ಮಾ ಹಾಗೂ ಪಂಜಾಬ್ ಕಿಂಗ್ಸ್ ವೇಗಿ ಅರ್ಶ್‌ದೀಪ್ ಸಿಂಗ್​ರ ಗೆಳತಿ ಸಮ್ರೀನ್ ಕೌರ್  ಅವರು 2026ರ ಐಪಿಎಲ್​ ಸೀಸನ್​ನಲ್ಲಿ ಸತತವಾಗಿ ತಂಡದ ಜೊತೆ ಕಾಣಿಸಿಕೊಂಡಿದ್ದಾರೆ. ಇಬ್ಬರು ಸೋಶಿಯಲ್​ ಮೀಡಿಯಾದ ಇನ್‌ಫ್ಲುಯೆನ್ಸರ್'ಗಳಾಗಿದ್ದು ಇವರ ಮೂಲಕ ತಂಡದ ರಹಸ್ಯಗಳು, ತಂತ್ರ ಬಯಲಾಗ್ತಿದೆ ಎಂದು ಆರೋಪ ವ್ಯಕ್ತವಾಗುತ್ತಿದೆ. ಆದರೆ, ಈ ಬಗ್ಗೆ ಯಾವುದೇ ನಿಖರ ಮಾಹಿತಿ ಹೊರಬಿದ್ದಿಲ್ಲ
ಆದರೆ, ಈ ವಿಚಾರಕ್ಕೆ ಬಿಸಿಸಿಐ ಕಿಡಿಕಾರುತ್ತಿರುವುದಕ್ಕೂ ಒಂದು ಕಾರಣವಿದೆ. ಅದೇನೆಂದರೆ,  ಈ ಹಿಂದೆ ಕೆಲವು ಇನ್‌ಫ್ಲುಯೆನ್ಸರ್‌ಗಳು ಬೆಟ್ಟಿಂಗ್ ಆ್ಯಪ್‌ಗಳನ್ನು ಪ್ರಮೋಟ್ ಮಾಡಿರುವದೇ ಪ್ರಮುಖ ಕಾರಣ. ಹೀಗಾಗಿ, ತಂಡದ ರಹಸ್ಯ ಮಾಹಿತಿಯು ಬೆಟ್ಟಿಂಗ್ ಮಾಫಿಯಾ ಅಥವಾ ಇತರ ಮೂಲಗಳಿಗೆ ತಲುಪುವುದನ್ನು ತಡೆಗಟ್ಟಲು, ಲೀಗ್‌ನ ಪಾರದರ್ಶಕತೆಯನ್ನು ಕಾಪಾಡಲು ಬಿಸಿಸಿಐ ಈ ನಿರ್ಧಾರ ತೆಗೆದುಕೊಂಡಿದೆ ಎನ್ನಲಾಗಿದೆ.

 ದೇವಜಿತ್ ಸೈಕಿಯಾ ಹೇಳಿದ್ದೇನು?

 "ಐಪಿಎಲ್​ ತಂಡದ ಬಸ್‌ಗಳಲ್ಲಿ ಮತ್ತು ಹೋಟೆಲ್ ಕೊಠಡಿಗಳಲ್ಲಿ ಅನಧಿಕೃತ ವ್ಯಕ್ತಿಗಳ ಸಂಚಾರ ಹೆಚ್ಚಾಗಿದೆ. ಇದು ಭ್ರಷ್ಟಾಚಾರ ತಡೆ ನಿಯಮಗಳ ಉಲ್ಲಂಘನೆಯಾಗಿದೆ. ಇನ್ನು ಮುಂದೆ ಆಟಗಾರರ ರೂಮ್‌ಗಳಿಗೆ ಅಥವಾ ಟೀಮ್ ಬಸ್‌ಗಳಿಗೆ ಗರ್ಲ್‌ಫ್ರೆಂಡ್‌ಗಳಿಗೆ ಪ್ರವೇಶವಿರುವುದಿಲ್ಲ" ಎಂದು ಮೇ.7ರಂದು  ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ  ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ.  

ಆಟಗಾರರು ಮತ್ತು ಫ್ರಾಂಚೈಸಿ ವಿರುದ್ಧ ಕ್ರಮ

ಕೇವಲ ಹಾರ್ದಿಕ್ ಅಥವಾ ಅರ್ಶ್‌ದೀಪ್ ಮಾತ್ರವಲ್ಲದೆ, ಇಶಾನ್ ಕಿಶನ್ ಮತ್ತು ಯಶಸ್ವಿ ಜೈಸ್ವಾಲ್ ಕೂಡ ತಮ್ಮ ಗೆಳತಿಯರ ಜೊತೆ ಕಾಣಿಸಿಕೊಂಡಿರುವುದು ವರದಿಯಾಗಿದೆ. ತಂಡದ ಮಾಲೀಕರು ಈ ಬಗ್ಗೆ ದೂರನ್ನು ನೀಡಿದ್ದು, ಮಾಹಿತಿಯ ಸೋರಿಕೆಯಿಂದಾಗಿ ಪಂದ್ಯದ ಫಲಿತಾಂಶದ ಮೇಲೆ ಪರಿಣಾಮ ಬೀರಬಹುದು ಎಂಬ ಭೀತಿ ವ್ಯಕ್ತಪಡಿಸಿದ್ದಾರೆ. ಹೀಗಾಗಿ, ಮುಂದಿನ ಪಂದ್ಯಗಳಲ್ಲಿ ಆಟಗಾರರ ಗೆಳತಿಯರಿಗೆ ಕ್ರೀಡಾಂಗಣದ ನಿರ್ಬಂಧಿತ ಪ್ರದೇಶಗಳಿಗೆ ಪ್ರವೇಶ ಸಿಗುವುದು ಅನುಮಾನ ಎನ್ನಲಾಗಿದೆ. ನಿಯಮ ಉಲ್ಲಂಘಿಸುವ ಆಟಗಾರರು ಅಥವಾ ಫ್ರಾಂಚೈಸಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಬಿಸಿಸಿಐ ಎಚ್ಚರಿಸಿದೆ, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net