

ಕಾಠ್ಮಂಡು: ನೈಜವಾದ ಅಯೋಧ್ಯೆ ನೇಪಾಳದಲ್ಲಿದೆ, ಶ್ರೀರಾಮ ಕೂಡ ನೇಪಾಳಿ ಎಂದು ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾಗಿದ್ದ ನೇಪಾಳ ಪ್ರಧಾನಿ ಕೆ.ಪಿ. ಶರ್ಮ ಓಲಿ ಈಗ ವಿಷಾದದ ಮಾತುಗಳನ್ನಾಡಿದ್ದಾರೆ.
ಅಂಥ ಹೇಳಿಕೆ ನೀಡಿದ್ದು, ಅಯೋಧ್ಯೆಯ ಘನತೆ ಕುಗ್ಗಿಸುವುದಕ್ಕಲ್ಲ ಅಥವಾ ಅದರ ಸಾಂಸ್ಕೃತಿಕ ಮಹತ್ವವನ್ನು ಕಡೆಗಣಿಸುವುದಕ್ಕಲ್ಲ ಎಂದು ಓಲಿ ಹೇಳಿದ್ದಾರೆ.
ಇದನ್ನೂ ಓದಿ; ಸಚಿನ್ ಪೈಲಟ್ ತಲೆದಂಡಕ್ಕೆ ಕಾರಣವಾದ ಮೂರು ಬೇಡಿಕೆಗಳು
ಯಾರ ಮನಸ್ಸಿಗೂ ನೋವುಂಟು ಮಾಡುವ ಉದ್ದೇಶ ಹೊಂದಿಲ್ಲ. ಇನ್ನಾವುದೇ ರಾಜಕೀಯ ಕಾರಣಗಳಿಗಾಗಿಯೂ ಪ್ರಧಾನಿ ಮಾತನಾಡಿಲ್ಲ ಎಂದು ನೇಪಾಳ ವಿದೇಶಾಂಗ ಇಲಾಖೆ ಹೊರಡಿಸಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇದರ ಹೊರತಾಗಿಯೂ, ನೇಪಾಳ ಸಾಂಸ್ಕೃತಿಕವಾಗಿ ನೇಪಾಳ ಹತ್ತಿಕ್ಕಲ್ಪಟ್ಟಿದೆ. ಶ್ರೀರಾಮನಿಗೆ ಸೀತೆಯನ್ನು ಕೊಟ್ಟಿದ್ದು ನಾವೇ ಎಂಬುದು ನಮ್ಮ ನಂಬಿಕೆಯಾಗಿದೆ. ಅಂತೆಯೇ ರಾಮನನ್ನು ಅಯೋಧ್ಯೆಯಿಂದ ಕೊಟ್ಟಿದ್ದು ನಾವೇ, ಅದು ಭಾರತದಲ್ಲಿಲ್ಲ. ಬಿರ್ಗುಂಜ್ನ ಪಶ್ಚಿಮಕ್ಕಿರುವ ಪುಟ್ಟ ಹಳ್ಳಿ ಅಯೋಧ್ಯೆ. ಈಗ ಸೃಷ್ಟಿಯಾಗಿರುವುದಲ್ಲ ಎಂದು ಓಲಿ ಹೇಳಿದ್ದರು.