'ನನ್ನ ಹಿಂಭಾಗವನ್ನೇ ಯಾಕೆ ತೋರಿಸ್ತೀರಿ?': ಖ್ಯಾತ ನಟಿ ಹೀಗೆನ್ನಲು ಕಾರಣವಿದೆ ನೋಡಿ..

nora pathehi
Published on

ಮುಂಬೈ: ಬಾಲಿವುಡ್ ಬ್ಯೂಟಿ ನೋಹಾ ಫತೇಹಿ ಸ್ಪೆಷಲ್ ಸಾಂಗ್‌ಗಳಿಂದಲೇ ಹೆಚ್ಚು ಸಿನಿರಸಿಕರಿಗೆ ಪರಿಚಿತ. ಕೆನಡಾ ಮೂಲದ ಈ ಬೆಡಗಿ ಸದ್ಯ ಹಿಂದಿ ಸಿನಿಮಾ, ರಿಯಾಲಿಟಿ ಶೋಗಳಲ್ಲಿ ಬ್ಯುಸಿಯಾಗಿದ್ದಾಳೆ. 'ಬಾಹುಬಲಿ' ಚಿತ್ರದಲ್ಲಿ ಕೂಡ ಬಿಂದಾಸ್ ಸ್ಟೆಪ್ಸ್ ಹಾಕಿ ಗಮನಸೆಳೆದಿದ್ದ ಈ ನಟಿ ಎಲ್ಲೇ ಕಂಡರೂ ಫೋಟೊ, ವಿಡಿಯೋಗಳನ್ನು ಕ್ಲಿಕ್ಕಿಸುತ್ತಾರೆ. ಆದರೆ ಈ ಬಿಂದಾಸ್ ಬೆಡಗಿ ಫೋಟೋಗ್ರಾಪರ್​ ಗಳ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿದ್ದಾರೆ.

ತನ್ನ ಖಾಸಗಿ ಭಾಗಗಳನ್ನು ಜೂಮ್ ಮಾಡಿ ತೋರಿಸುತ್ತಾರೆ. ಇದು ಎಷ್ಟು ಸರಿ ಎಂದು ಆಕೆ ಪ್ರಶ್ನಿಸಿದ್ದಾರೆ. ಅಂತಹುದನ್ನು ಇವರು ಎಂದೂ ನೋಡಿಲ್ಲ ಎನಿಸುತ್ತದೆ. ಯಾವಾಗಲೂ ಅದನ್ನೇ ಜೂಮ್ ಮಾಡುತ್ತಾರೆ ಎಂದು ನೋರಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಾತ್ರಿ ಕಳೆದು ಹಗಲು ಆಗುವಷ್ಟರಲ್ಲಿ ನನ್ನ ಬದುಕು ಅನೇಕ ಬಾರಿ ಬದಲಾಗಿದೆ. ಆದರೆ, ನನಗೆ ಮಾತ್ರವಲ್ಲ ಎಲ್ಲಾ ನಟಿಯರ ವಿಚಾರದಲ್ಲಿ ಕೂಡ ಇದೇ ರೀತಿ ಮಾಡುತ್ತಾರೆ. ಬೇರೆಯವರ ಹಿಂಭಾಗ ಇಷ್ಟು ಎಕ್ಸೈಟಿಂಗ್ ಆಗಿ ಇರಲ್ಲ ಎನಿಸುತ್ತೆ. ನನ್ನ ಹಿಂದೆ ಬೀಳುತ್ತಾರೆ. ಯಾವಾಗಲೂ ಅದರ ಮೇಲೆಯೇ ಗಮನ ಇರುತ್ತದೆ. ಅವರು ಹೀಗೆ ಜೂಮ್ ಮಾಡುವ ಉದ್ದೇಶ ಏನೇ ಇರಬಹುದು, ಅದು ಬೇರೆ ವಿಚಾರ. ಆದರೆ ನಾನು ಎಲ್ಲರಿಗೂ ಕರೆದು ತಿಳಿಹೇಳಲು ಸಾಧ್ಯವಿಲ್ಲ, ನಾನು ಈಗಲೂ ಸುತ್ತಾಡುತ್ತಿದ್ದೇನೆ. ನನ್ನ ದೇಹದ ಬಗ್ಗೆ ಬಹಳ ಭರವಸೆ ಇದೆ" ಎಂದಿದ್ದಾಳೆ.

ತಾರೆಯರು ಅಂದವಾಗಿ ಕಾಣಲು ದೇಹದ ವಿವಿಧ ಭಾಗಗಳಿಗೆ ಸರ್ಜರಿ ಮಾಡಿಸಿಕೊಳ್ಳುತ್ತಾರೆ. ಆದರೆ ಕೆಲವರ ಬಗ್ಗೆ ಸುಖಾಸುಮ್ಮನೆ ಅಂತೆ ಕಂತೆ ಸುದ್ದಿ ಹರಿದಾಡುತ್ತದೆ. ದುರದೃಷ್ಟವಶಾತ್ ಸದ್ಯ ಸಾಮಾಜಿಕ ಮಾಧ್ಯಮದಲ್ಲಿ ಇದೇ ಟ್ರೆಂಡ್ ಆಗಿರುವ ವಿಷಯ. ಸಾಮಾಜಿಕ ಮಾಧ್ಯಮ ಅಲ್ಗಾರಿದಮ್ ಆಟದ ರೀತಿ ಇರುತ್ತದೆ. ನನ್ನ ಅದೃಷ್ಟ ನನಗೆ ಒಳ್ಳೆ ದೇಹವಿದೆ. ನಾನು ಸರ್ಜರಿ ಮಾಡಿಸಿಕೊಳ್ಳುವ ಅವಶ್ಯಕತೆಯಿಲ್ಲ. ನನ್ನ ದೇಹದ ಬಗ್ಗೆ ಗೌರವವಿದೆ. ಅದೇ ನನ್ನ ಆಸ್ತಿ. ಅದು ಹೇಗೆ ಇದ್ದರೂ ನನಗೆ ನಾಚಿಕೆಯಿಲ್ಲ ಎಂದಿದ್ದಾಳೆ.

ತನ್ನನ್ನು ಗ್ಲಾಮರ್ ಡಾಲ್ ರೀತಿ ನೋಡುವ ಬಗ್ಗೆಯೂ ನೋರಾ ಮಾತನಾಡಿದ್ದಾಳೆ. ಸೌಂದರ್ಯ ಮತ್ತು ಅಜ್ಞಾನ ಎರಡೂ ನೋಡುಗರ ಕಣ್ಣಿನಲ್ಲಿದೆ ಎಂದು ನಾನು ಭಾವಿಸುತ್ತೇನೆ. ನಾನ್ನ ಕೆಲಸವನ್ನು ಬಹಳಷ್ಟು ಜನರು ಮೆಚ್ಚುತ್ತಾರೆ. ನಾನು ಹೇಗೆ ಬಂದೆ, ನಾನು ಉದ್ಯಮಕ್ಕೆ ಏನು ತಂದಿದ್ದೇನೆ ಮತ್ತು ನನ್ನ ಬ್ರ್ಯಾಂಡ್‌ ಏನು ಎನ್ನುವುದು ಗೊತ್ತಿದೆ. ನಾನು ಏನು ಮಾಡುತ್ತೇನೆ ಎಂಬುದರ ಬಗ್ಗೆ ಗಂಭೀರವಾಗಿರುತ್ತೇನೆ. ನನಗೆ ವರ್ಕ್ ಎಥಿಕ್ಸ್ ಮುಖ್ಯ ಎಂದು ಆಕೆ ವಿವರಿಸಿದ್ದಾರೆ.

ನೋರಾ ಫತೇಹಿ ಹೇಳಿಕೆ ಸದ್ಯ ಸಖತ್ ವೈರಲ್ ಆಗುತ್ತಿದೆ. 'ಮಡಗಾಂವ್ ಎಕ್ಸ್‌ಪ್ರೆಸ್' ಚಿತ್ರದಲ್ಲಿ ಆಕೆ ನಟಿಸಿದ್ದಾರೆ. 'ಡ್ಯಾನ್ಸಿಂಗ್ ಡ್ಯಾಡ್' ಹಾಗೂ 'ಮಟ್ಕಾ' ಎನ್ನುವ ಮತ್ತೆರಡು ಸಿನಿಮಾಗಳಲ್ಲಿ ಬಿಂದಾಸ್ ಬೆಡಗಿ ಮಿಂಚಿದ್ದಾರೆ. ಇನ್ನಷ್ಟೆ ಈ ಸಿನಿಮಾಗಳು ತೆರೆಗೆ ಬರಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net