VIDEO| ಸೆಕ್ಯೂರಿಟಿಗಾರ್ಡ್​ಗೆ ಮನಬಂದಂತೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಮಹಿಳೆ

noida woman awaz (1)
ಸಾಂದರ್ಭಿ ಚಿತ್ರ
Published on

ನೋಯ್ಡಾ: ಮಹಿಳೆಯೊಬ್ಬರು ಸೆಕ್ಯೂರಿಟಿಗಾರ್ಡ್​ಗೆ ಮನಬಂದಂತೆ ಬೈಯ್ದಿರುವ ಘಟನೆ ಉತ್ತರ ಪ್ರದೇಶದ ನೋಯ್ಡಾ ಬಳಿ ನಡೆದಿದೆ.

ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ನೋಯ್ಡಾದ ಸೆಕ್ಟರ್ 46 ರ ಗಾರ್ಡನ್ ಗ್ಲೋರಿ ಸೊಸೈಟಿಯಲ್ಲಿ ನಡೆದ ಘಟನೆ ಎನ್ನಲಾಗಿದ್ದು, ಮಹಿಳೆ ತನ್ನ ಸಾಮಾನುಗಳೊಂದಿಗೆ ಸೊಸೈಟಿಗೆ ಬಂದಿದ್ದಳು. ಮಿನಿ ಟ್ರಕ್‌ನಲ್ಲಿ ತುಂಬಿದ್ದ ಸರಕುಗಳ ಪ್ರವೇಶಕ್ಕೆ ಸಿಬ್ಬಂದಿ ಪಾಸ್ ಕೇಳಿದಾಗ, ಅದನ್ನು ತೋರಿಸಲು ಮಹಿಳೆ ನಿರಾಕರಿಸಿದ್ದಾಳೆ. ಆಗ ಸೆಕ್ಯೂರಿಟಿಗಾರ್ಡ್​ ವಾಹನ ಬಿಡಲು ನಿರಾಕರಿಸಿದ್ದಾನೆ.

ಇದರಿಂದ ಕೋಪಗೋಂಡ ಮಹಿಳೆ ಕೋಪಗೊಂಡ ಯುವತಿಯು, ಸೆಕ್ಯೂರಿಟಿಗಾರ್ಡ್​ಗೆ ನಿಂದಿಸಲು ಪ್ರಾರಂಭಿಸಿದ್ದಾಳೆ. ಜಗಳವಾಡುತ್ತಿದ್ದಾಗ ಮಹಿಳೆ ಏಕಾಏಕಿ ಕೂಗಾಡಲು ಆರಂಭಿಸಿದ್ದಾಳೆ. ಇದಾದ ಬಳಿಕ ಆಕೆ ಅವಾಚ್ಯ ಶಬ್ದಗಳಿಂದ ನಿಂದಿಸತೊಡಗಿದಳು. . ಇದಾದ ಬಳಿಕ ಇತರರು ಆಕೆಯನ್ನು ಸಮಾಧಾನ ಪಡಿಸಲು ಮುಂದಾದಾಗ ಅವರಿಗೆ ದೂರ ಇರುವಂತೆ ಆಕೆ ಹೇಳಿದ್ದಾಳೆ. ಇತ್ತೀಚಿಗೆ ನೋಯ್ಡಾದಲ್ಲಿ, ಇಂತಹ ಪ್ರಕರಣಗಳು ಮುನ್ನೆಲೆಗೆ ಬರುತ್ತಿವೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net